ಬ್ಯಾಂಕ್ ಕಳ್ಳತನಕ್ಕೆ ಬಂದ್ರು: ಬೀರು ಒಡೆಯದ ಕಾರಣ ವಾಪಸ್ ಆದ ಕಳ್ಳರು

ಬುಧವಾರ, 18 ಜುಲೈ 2018 (18:21 IST)
ಗ್ಯಾಸ್ ಕಟ್ಟರ್ ಮೂಲಕ ಕಿಟಕಿ ಬೇರ್ಪಡಿಸಿ ಬ್ಯಾಂಕಿಗೆ ಕನ್ನ ಹಾಕಿ ಕಳ್ಳತನಕ್ಕೆ ವಿಫಲ ನಡೆಸಿರುವ ಘಟನೆ ನಡೆದಿದೆ. ಬ್ಯಾಂಕಿನಲ್ಲಿದ್ದ ಬೀರು ಒಡೆಯಲು ವಿಫಲವಾಗಿದ್ದರಿಂದ ಕಳ್ಳರು ವಾಪಸ್ ಆಗಿದ್ದಾರೆ. ಕಳ್ಳತನಕ್ಕೆ ಯತ್ನ ನಡೆಸಿದ್ದವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಹಾವೇರಿಯಲ್ಲಿ ಬ್ಯಾಂಕ್ ಕಳುವಿಗೆ ವಿಫಲ ಯತ್ನ ನಡೆದಿದೆ. ಹಾವೇರಿ ವಿದ್ಯಾನಗರದ ಕೆವಿಜಿ ಬ್ಯಾಂಕ್ ನಲ್ಲಿ ಇಂದು ನಸುಕಿನಲ್ಲಿ ಕಳವಿನ ಯತ್ನ ನಡೆದಿದ್ದು, ಕಿಟಕಿಯನ್ನು ಗ್ಯಾಸ್ ಕಟ್ಟರ್ ಮೂಲಕ ಬೇರ್ಪಡಿಸಿ ಕಳ್ಳರು ಒಳ ಬಂದಿದ್ದಾರೆ. ಬೀರು ಒಡೆಯಲು ನಡೆಸಿದ ಪ್ರಯತ್ನವು ವಿಫಲವಾಗಿದೆ. ಹೀಗಾಗಿ ಕಳ್ಳರು ಬರೀಗೈಲಿ ವಾಪಸಾಗಿದ್ದಾರೆ.  

ಸ್ಥಳಕ್ಕೆ ಹಾವೇರಿ ಎಸ್ಪಿ ಪರಶುರಾಮ್ ಭೆಟಿ ನೀಡಿದರು.  ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳ ಪರಿಶೀಲನೆ ನಡೆಸಿದ್ದಾರೆ.  ಕಳ್ಳರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ