ಗಾಂಧೀಜಿ ರಾಷ್ಟ್ರಪಿತ ಎನ್ನಲು ಅವರೇನು ರಾಷ್ಟ್ರದ ಗಂಡನಾ ಅಂತ ಅಂಬೇಡ್ಕರ್ ಕೇಳಿದ್ದರು: ಯತ್ನಾಳ್ ವಿವಾದ

Krishnaveni K

ಗುರುವಾರ, 14 ನವೆಂಬರ್ 2024 (11:09 IST)
ಬೆಂಗಳೂರು: ಮಹಾತ್ಮಾ ಗಾಂಧೀಜಿ ರಾಷ್ಟ್ರಪತಿ ಎನ್ನುವುದಕ್ಕೆ ಅವರೇನು ದೇಶದ ಗಂಡನಾ ಅಂತ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಕೇಳಿದ್ದರು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮೊನ್ನೆಯಷ್ಟೇ ಕಾಂಗ್ರೆಸ್ ನಾಯಕ ಅಜ್ಜಂಪಿರ್ ಖಾದ್ರಿ ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಬಯಸಿದ್ದರು ಎಂಬ ಹೇಳಿಕೆ ನೀಡಿದ್ದರು. ಇದು ವಿವಾದವಾಗುತ್ತಿದ್ದಂತೇ ಕ್ಷಮೆ ಕೇಳಿದ್ದರು. ಅಜ್ಜಂಪಿರ್ ಖಾದ್ರಿ ಹೇಳಿಕೆ ಬಗ್ಗೆ ಇದೀಗ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯಿಸಿದ್ದಾರೆ.

‘ಖಾದ್ರಿಗೆ ಬುದ್ಧಿ ಮತ್ತು ಮರ್ಯಾದೆ ಇಲ್ಲ. ಅಜ್ಜಂಪಿರ್ ಖಾದ್ರಿ ಅವರು ಅಂಬೇಡ್ಕರ್ ಬಗ್ಗೆ ಅಧ್ಯಯನ ಮಾಡಿಲ್ಲ. ಅಂಬೇಡ್ಕರ್ ಎಂದೂ ಇಸ್ಲಾಂ ಧರ್ಮಕ್ಕೆ ಸೇರಲು ಬಯಸಲಿಲ್ಲ. ಡಾ. ಅಂಬೇಡ್ಕರ್ ಅವರು ಹಿಂದೂ ವಿರೋಧಿಯಲ್ಲ ಎಂದು ಯತ್ನಾಳ್ ಹೇಳಿಕೆ ನೀಡಿದ್ದಾರೆ.

ಜೊತೆಗೆ ಅಜ್ಜಂಪಿರ್ ಬಗ್ಗೆ ಟೀಕೆ ನಡೆಸುವ ಭರದಲ್ಲಿ ಮಹಾತ್ಮಾ ಗಾಂಧೀಜಿ ಬಗ್ಗೆಯೂ ಮಾತನಾಡಿದ್ದಾರೆ. ‘ನಮ್ಮ ಜನ ಅಂಬೇಡ್ಕರ್ ವಿಚಾರಧಾರೆ ಓದಿಲ್ಲ. ಅದೇ ದೇಶದ ದುರ್ದೈವ. ಗಾಂಧಿಗಿಂತಲೂ ಅಂಬೇಡ್ಕರ್ ಶ್ರೇಷ್ಠ ಮನುಷ್ಯ.  ಗಾಂಧಿಗೆ ರಾಷ್ಟ್ರಪಿತ ಎನ್ನಬೇಡಿ ಎಂದು ಅಂಬೇಡ್ಕರ್ ಅಂದೇ ಹೇಳಿದ್ದರು. ರಾಷ್ಟ್ರಪಿತ ಹೇಗೆ ಆಗುತ್ತಾರೆ? ದೇಶಕ್ಕೆ ಗಂಡ ಇರ್ತಾನಾ ಎಂದು ಅಂದೇಅಂಬೇಡ್ಕರ್ ಹೇಳಿದ್ದರು’ ಎಂದು ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ