ಜಮೀರ್ ಅಹ್ಮದ್ ಅರೆಬಿಕ್ ತಳಿ ಎಂದು ನಿಂದಿಸಿದ್ದ ಪುನೀತ್ ಕೆರೆಹಳ್ಳಿ ರಾತ್ರೋ ರಾತ್ರಿ ಅರೆಸ್ಟ್

Krishnaveni K

ಗುರುವಾರ, 14 ನವೆಂಬರ್ 2024 (10:25 IST)
ಬೆಂಗಳೂರು: ಕುಮಾರಸ್ವಾಮಿಯವರ ಮೈ ಬಣ್ಣ ಹಿಡಿದು ಟೀಕೆ ಮಾಡಿದ್ದ ಸಚಿವ ಜಮೀರ್ ಅಹ್ಮದ್ ರನ್ನು ಅರೆಬಿಕ್ ತಳಿ ಎಂದು ನಿಂದಿಸಿದ್ದ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ರಾತ್ರೋ ರಾತ್ರಿ ಬಂಧಿಸಿದ್ದಾರೆ.

ಚನ್ನಪಟ್ಟಣದಲ್ಲಿ ಚುನಾವಣಾ ಪ್ರಚಾರದ ವೇಳೆ ಜಮೀರ್ ಅಹ್ಮದ್, ‘ಕರಿಯಾ ಕುಮಾರಸ್ವಾಮಿ ಬಿಜೆಪಿಗಿಂತ ಡೇಂಜರ್’ ಎಂದಿದ್ದರು. ಅವರ ಈ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಪುನೀತ್ ಕೆರೆಹಳ್ಳಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಸಂದೇಶ ನೀಡಿ ಜಮೀರ್ ಅಹ್ಮದ್ ರನ್ನು ಲೇ ಅರೆಬಿಕ್ ತಳಿ, ತುರ್ಕಾ ಎಂದೆಲ್ಲಾ ನಿಂದಿಸಿದ್ದರು.

ಈ ಸಂಬಂಧ ಪುನೀತ್ ಕೆರೆಹಳ್ಳಿ ವಿರುದ್ಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಅರ್ ದಾಖಲಾಗಿತ್ತು. ಜಮೀರ್ ಆಪ್ತ ಸಹಾಯಕ ಅಶೋಕ್ ಎಂಬವರು ದೂರು ನೀಡಿದ್ದರು. ಪುನೀತ್ ವಿರುದ್ಧ ಧರ್ಮ ಮತ್ತು ಜಾತಿ ನಿಂದನೆ ಹೆಸರಿನಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ರಾತ್ರೋ ರಾತ್ರಿ ಪೊಲೀಸರು ಪುನೀತ್ ಕೆರೆಹಳ್ಳಿಯವರನ್ನು ಬಂಧಿಸಿದ್ದಾರೆ. ತಡರಾತ್ರಿ ಪುನೀತ್ ಬಂಧಿಸಿದ ಚಾಮರಾಜಪೇಟೆ ಪೊಲೀಸರು ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಇದೀಗ ಅವರನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ