ಸಿದ್ದರಾಮಯ್ಯ ಹೊಂದಾಣಿಕೆ ರಾಜಕೀಯ ಮಾಡುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲ್ಲ. ನಾಚಿಕೆಯಾಗಬೇಕು ನಿಮಗೆ. ನಾನೇ ಕೊರೋನಾ ಟೈಂನಲ್ಲಿ ಆಸ್ಪತ್ರೆಗೆ ದಾಖಲಾದಾಗ 5 ಲಕ್ಷ ರೂ. ಬಿಲ್ ಆಗಿತ್ತು. ನನ್ನ ಪಾಡೇ ಹೀಗಿದ್ದರೆ ಜನಸಾಮಾನ್ಯರದ್ದು ಹೇಗಾಗಿರಬೇಡ. 25 ರೂ. ಒಂದು ಮಾಸ್ಕ್ ನಲ್ಲೇ ದುಡ್ಡು ಹೊಡೀತೀರಿ ಎಂದರೆ ಅಂತಹವರನ್ನು ಬಿಡಬೇಡಿ, ಜೈಲಿಗೆ ಹಾಕಿ ಎಂದು ಯತ್ನಾಳ್ ಆಗ್ರಹಿಸಿದ್ದಾರೆ.
ಆದರೆ ಸಿದ್ದರಾಮಯ್ಯಗೆ ಇಂತಹವರ ವಿರುದ್ಧ ಕ್ರಮ ಕೈಗೊಳ್ಳುವ ಧಮ್ ಇಲ್ಲ. ನನ್ನ ವಿರುದ್ಧ, ಪ್ರತಾಪ್ ಸಿಂಹ ವಿರುದ್ಧ ಕೇಸ್ ಹಾಕ್ತಾರೆ. ಹೊಂದಾಣಿಕೆ ರಾಜಕೀಯ ಮಾಡುವವರ ವಿರುದ್ಧ ಒಂದು ಹೇಳಿಕೆಯನ್ನೂ ನೀಡಲ್ಲ ಎಂದು ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.