ಮಸೀದಿ, ಚರ್ಚ್ ಮೇಲೆ ಕಂಟ್ರೋಲ್ ಇಲ್ಲ, ಹಿಂದೂಗಳ ಮೇಲೆ ಮಾತ್ರ ಯಾಕೆ: ಬಸನಗೌಡ ಪಾಟೀಲ್ ಯತ್ನಾಳ್

Krishnaveni K

ಶನಿವಾರ, 21 ಸೆಪ್ಟಂಬರ್ 2024 (14:37 IST)
ಹುಬ್ಬಳ್ಳಿ: ತಿರುಪತಿ ತಿಮ್ಮಪ್ಪನ ಲಡ್ಡಿಗೆ ಕಲಬೆರಕೆ ಮಿಶ್ರಣ ಮಾಡಿರುವುದರ ಬಗ್ಗೆ ಆಕ್ರೋಶ ಹೊರಹಾಕಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಸೀದಿ, ಚರ್ಚ್ ಮೇಲೆ ಸರ್ಕಾರದ ನಿಯಂತ್ರಣವಿಲ್ಲ, ಹಿಂದೂ ದೇವಾಲಯಗಳ ಮೇಲೆ ಮಾತ್ರ ಯಾಕೆ ಎಂದು ಕಿಡಿ ಕಾರಿದ್ದಾರೆ.

ತಿರುಪತಿ ತಿಮ್ಮಪ್ಪನ ಲಡ್ಡಿಗೆ ಮೀನಿನ ಎಣ್ಣೆ, ಗೋವು, ಹಂದಿ ಕೊಬ್ಬು ಮಿಶ್ರಣ ಮಾಡಿರುವುದು ಆಘಾತಕಾರೀ ಸುದ್ದಿ. ಸನಾತನ ಧರ್ಮದ ಪಾವಿತ್ರ್ಯತೆ ಹಾಳು ಮಾಡಲು ಕಾಂಗ್ರೆಸ್ ಮತ್ತು ಕೆಲವು ವಿರೋಧ ಪಕ್ಷದವರು, ವೈಎಸ್ ರಾಜಶೇಖರ ರೆಡ್ಡಿ ಪುತ್ರ ಜಗಮೋಹನ್ ರೆಡ್ಡಿ ಮುಂತಾದವರೆಲ್ಲಾ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾದ ಕುಟುಂಬಗಳು. ಇವರು ಹಿಂದೂ ಹೆಸರು ಇಟ್ಟುಕೊಂಡಿದ್ದಾರೆ. ಆದರೆ ತಿರುಪತಿ ದೇವಸ್ಥಾನದ ಹಿಂದಿನ ಅಧ್ಯಕ್ಷ ಜಗನ್ ರೆಡ್ಡಿ ಚಿಕ್ಕಪ್ಪ. ಅವರೂ ಕ್ರಿಶ್ಚಿಯನ್.

ಯಾವುದೇ ಧಾರ್ಮಿಕ ಕೇಂದ್ರದ ಆಡಳಿತ ಮಂಡಳಿಯಲ್ಲಿ ಆಯಾ ಧರ್ಮದವರೇ ಇರಬೇಕು. ಆಗಲೇ ಆ ಧರ್ಮದ ಪಾವಿತ್ರ್ಯತೆ ಉಳಿಯುತ್ತದೆ. ಆದರೆ ಈವತ್ತು ಮೀನಿನ ಎಣ್ಣೆ, ಗೋ, ಹಂದಿ ಕೊಬ್ಬು ಬಳಕೆ ಮಾಡಿ ಇಡೀ ಹಿಂದೂ ಸಮಾಜಕ್ಕೆ ಆಘಾತವಾಗಿದೆ. ಇದನ್ನು ಇಷ್ಟಕ್ಕೆ ಬಿಡಬಾರದು. ಈಗಾಗಲೇ ಕೇಂದ್ರ ಆರೋಗ್ಯ ಮಂತ್ರಿಗಳು ವರದಿ ಕೇಳಿದ್ದಾರೆ.

ಇದರಲ್ಲಿ ತಿರುಪತಿ ದೇವಸ್ಥಾನ ಮತ್ತು ಹಿಂದೂ ದೇವಸ್ಥಾನದ ಪಾವಿತ್ರ್ಯತೆ ಹಾಳು ಮಾಡಲು ಯತ್ನಿಸಿದ್ದಾರೆ ಅವರನ್ನು ಗಲ್ಲಿಗೇರಿಸುವ ಕೆಲಸವಾಗಬೇಕು. ಇಲ್ಲ ಅಂದ್ರೆ ಹಿಂದೂ ಧರ್ಮ, ಸನಾತನ ಧರ್ಮದ ಮೇಲೆ ದಾಳಿ ಮಾಡಿದರೆ ಯಾರೂ ಕೇಳೋರು ಇಲ್ಲ ಅಂತಾಗಿದೆ. ಅವರಿಗೆ ತಕ್ಕ ಪಾಠವಾಗಬೇಕು ಎಂದು ಸರ್ಕಾರಗಳಿಗೆ ನಾನು ಆಗ್ರಹ ಮಾಡುತ್ತೇನೆ ಎಂದು ಬಸನಗೌಡ ಯತ್ನಾಳ್ ಹೇಳಿದ್ದಾರೆ. ಈಗ ದೇಶದಲ್ಲಿ ಚರ್ಚ್ ಮೇಲೆ, ಮಸೀದಿ ಮೇಲೆ ಸರ್ಕಾರದ ನಿಯಂತ್ರಣವಿಲ್ಲ. ಆದರೆ ಹಿಂದೂ ದೇವಾಲಯಗಳ ಮೇಲೆ ಮಾತ್ರ ಯಾಕಿದೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ