ರಾಜ್ಯ ಕಾಂಗ್ರೆಸ್ನಲ್ಲಿ ಪರಸ್ಪರ ಟ್ವೀಟ್ ವಾರ್ ಮುಂದುವರಿದಿದೆ. ಎಂ.ಬಿ.ಪಾಟೀಲ್ ವಿರುದ್ಧ ಡಿಕೆಶಿ ಹೇಳಿಕೆಗೆ ಕಾಂಗ್ರೆಸ್ನ ಹಿರಿಯ ನಾಯಕರು ಬೇಸರ ವ್ಯಕ್ತಪಡಿಸುತ್ತಿದ್ದು, ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.
ಇದಕ್ಕೆ ಶಾಸಕ ಪ್ರೀಯಾಂಕ್ ಖರ್ಗೆ ಹೊರತಾಗಿಲ್ಲ. ರಮ್ಯಾ ಅವರು ಪಕ್ಷಕ್ಕೆ ತಮ್ಮದೆ ಆದ ಕೋಡುಗೆ ನೀಡಿದ್ದಾರೆ.ಸಂಸದರಾಗಿ ಕೆಲಸ ಮಾಡಿದ್ದಾರೆ,ರಾಷ್ಟ್ರ ಮಟ್ಟದಲ್ಲಿ ಕೆಲಸ ಮಾಡಿದ್ದಾರೆ ಎಂದು ರಮ್ಯ ಪರವಾಗಿ ಬ್ಯಾಟ್ ಬೀಸಿದ್ದಾರೆ. ಬಿಜೆಪಿ ಕುರಿತು ಮಾತನಾಡಿದ ಖರ್ಗೆ ಬಿಜೆಪಿ ತಟ್ಟೆಯಲ್ಲೆ ಹೆಗ್ಗಣ ಬಿದ್ದಿದೆ ಅದನ್ನ ಮೊದಲು ನೋಡಿಕೊಳ್ಳಲಿ, ನಮ್ಮ ಬಗ್ಗೆ ಚಿಂತೆ ಮಾಡೋದನ್ನ ಕಡಿಮೆ ಮಾಡಲಿ ಎಂದು ಹೇಳಿದ್ರು. ಯತ್ನಾಳ್ ಬಿಜೆಪಿ ವಿರುದ್ಧ ಮಾತನಾಡಿದ್ರು ಅದರ ವಿರುದ್ದ ಕಟೀಲ್ ಏನು ಕ್ರಮ ತೆಗೆದುಕೊಂಡಿದ್ದಾರೆ ಎಂದು ಬಿಜೆಪಿಯನ್ನು ಪ್ರಶ್ನೆ ಮಾಡಿದ್ರು. ಬಿಜೆಪಿಯಲ್ಲಿ ಸಿಡಿ ಕೊಟ್ಟರೆ ಮಂತ್ರಿ ಆಗ್ತಾರೆ. ಸಂಪುಟ ರಚನೆ ಸಮೀಪ ಬಂದಿದೆ ಆದ್ರಿಂದ ಮತ್ತೆ ಸಿಡಿ ರೆಡಿ ಆಗ್ತವೆ. ಇದು ನನ್ನ ಹೇಳಿಕೆಯಲ್ಲ ಅವರ ಪಕ್ಷದವರೆ ಹೇಳಿರೋದನ್ನ ನಾನು ಹೇಳ್ತಿದ್ದಿನಿ ಅಷ್ಟೆ. ಇಲ್ಲ ಅಂದ್ರೆ ಇದಕ್ಕೆ ಮತ್ತೆ ನನಗೆ ನೋಟಿಸ್ ಕೊಡ್ತಾರೆ ಎಂದು ಪ್ರಿಯಾಂಕ್ ಖರ್ಗೆ ಕಿಡಿ ಕಾರಿದ್ದಾರೆ.