ಒಂದು ಹೆಣ್ಣಿಂದ ಡಿಕೆಶಿಗೆ ಶೇಪ್ ಔಟ್ ಆಗಿದ್ದಕ್ಕೆ ಖುಷಿ ಆಗಿದೆ: ಅಶ್ವಥ್ ನಾರಾಯಣ್
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ರಮ್ಯಾ ಕಿಡಿಕಾರಿದ್ದರಿಂದ ನನಗೆ ಖುಷಿ ಆಗಿದೆ. ಅವರಿಗೆ ಒಬ್ಬ ಹೆಣ್ಣು ಮಗಳಿಂದ ಶೇಪ್ ಔಟಾಗಿದೆ ಎಂದು ಸಚಿವ ಅಶ್ವಥ್ ನಾರಾಯಣ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಭಾರೀ ಬಿಲ್ಡಪ್ ಕೊಡುತ್ತಿದ್ದರು. ನಾನು ಯಾರಿಗೆ ಬೇಕಾದರೂ ತಾಗ್ತೀನಿ ಅಂತ ಬಿಲ್ಡಪ್ ಕೊಡುತ್ತಿದ್ದರು. ಆದರೆ ಈಗ ಡಿಕೆ ಶಿವಕುಮಾರ್ ಗೆ ರಮ್ಯಾ ಹೇಳಿಕೆಯಿಂದ ಮುಖಭಂಗವಾದಂತಾಗಿದೆ ಎಂದರು.
ಅಶ್ವಥ್ ನಾರಾಯಣನ ಮುಗಿಸಿಬಿಡ್ತೀನಿ ಅಂತ ಹೋರಟಿದ್ದರು. ಆದರೆ ಈಗ ಅವರೇ ಐಸೋಲೇಟ್ ಆಗಿದ್ದಾರೆ. ರಮ್ಯಾ ಟೀಕೆ ಮಾಡಿದಳು ಅಂತ ಅವರ ಬಗ್ಗೆ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.
ಎಂಥ ವ್ಯಕ್ತಿ ಅಧ್ಯಕ್ಷರಾಗಿದ್ದಾರಪ್ಪ ಎಂಬ ಮುಜುಗರ ಕಾಂಗ್ರೆಸ್ ನಾಯಕರಿಗೆ ಆಗಿದೆ. ಅನುಕಂಪ ಒಳ್ಳೆಯವರ ಮೇಲೆ ಇರತ್ತೆ. ಸಜ್ಜನರ ಮೇಲೆ ಇರತ್ತೆ. ಡಿಕೆಶಿವಕುಮಾರ್ ಅಂಥವರ ಮೇಲಲ್ಲ. ಅವರದ್ದೇ ಪಕ್ಷದ ಹೆಣ್ಣು ಮಗಳ ಮೇಲೇಯೇ ತೇಜೋವಧೆ ಮಾಡಿದರೆ ಏನಾಗುತ್ತೆ ಎಂದು ಈ ಘಟನೆಯಿಂದ ಡಿಕೆ ಶಿವಕುಮಾರ್ ಅವರಿಗೆ ಅರಿವಾಗಿರಬೇಕು ಎಂದು ಅಶ್ವಥ್ ನಾರಾಯಣ್ ಹೇಳಿದರು.