ಬಿಬಿಸಿ#ಬಿಯಾಂಡ್ ಫೇಕ್ ನ್ಯೂಸ್

ಶನಿವಾರ, 10 ನವೆಂಬರ್ 2018 (14:01 IST)
ಬೆಂಗಳೂರು: ಫೇಕ್ ಸುದ್ದಿಗಳಿಗೆ ಸಂಬಂಧಿಸಿದಂತೆ ಬಿಬಿಸಿ ಅಂತರರಾಷ್ಟ್ರೀಯ ಆಂಟಿ ಡಿಸ್ನಿಫರ್ಮೇಷನ್ ಇನಿಶಿಯೇಟಿವ್ ಅನ್ನು ಆರಂಭಿಸಿದೆ. ನವೆಂಬರ್ 12ರಂದು ಸುಳ್ಳು ಸುದ್ದಿಗಳಿಗೆ ಸಂಬಂಧಿಸಿದಂತೆ #ಬಿಯಾಂಡ್ ಫೇಕ್ ನ್ಯೂಸ್’ ಯೋಜನೆಯನ್ನು ಬಿಡುಗಡೆ ಮಾಡಲಿದೆ.

ಈ ಯೋಜನೆಯಲ್ಲಿ ಫೇಕ್ ಸುದ್ದಿಗಳು ಹೇಗೆ ದುರ್ಬಳಕೆ ಹಾಗೂ ಹಂಚುವಿಕೆಯಾಗುತ್ತಿದೆ ಎಂಬುದರ ಕುರಿತು ಮಾಹಿತಿಯನ್ನು ನೀಡಲಿದೆ.

ಈ ಸುಳ್ಳು ಸುದ್ದಿಗಳಿಂದ ಸಾಮಾಜಿಕ ಹಾಗೂ ರಾಜಕೀಯದ ಮೇಲೇ ಹೇಗೆ ದುಷ್ಟರಿಣಾಮ ಬೀರುತ್ತದೆ ಎಂಬುದರ ಕುರಿತು ಬಿಬಿಸಿ ಸಂಶೋಧನೆಯೊಂದನ್ನು ಬಿಡುಗಡೆ ಮಾಡಿದೆ.


ಇಂಡಿಯಾ ಹಾಗೂ ಕೀನ್ಯಾದಲ್ಲಿ ಈಗಾಗಲೇ ಈ ಬಿಯಾಂಡ್ ಫೇಕ್ ನ್ಯೂಸ್ ಕುರಿತ ಮಾಧ್ಯಮ ಸಾಕ್ಷರತಾ ಕಾರ್ಯಗಾರ ಆರಂಭಿಸಲಾಗಿದೆ. ಹಾಗೇ ಡಿಜಿಟಲ್ ಸಾಕ್ಷರತೆ ಕಾರ್ಯಾಗಾರವನ್ನು ದೇಶಾದ್ಯಂತ ಶಾಲೆಗಳಿಗೆ ಹಂಚಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ