BBMP-ಗುತ್ತಿಗೆದಾರರ ‘ಕಸ’ ಫೈಟ್

ಸೋಮವಾರ, 4 ಸೆಪ್ಟಂಬರ್ 2023 (21:08 IST)
ಹೊರ ರಾಜ್ಯದ ಗುತ್ತಿಗೆದಾರರಿಗೆ ಕಸದ ಟೆಂಡರ್ ನೀಡಲು ಹೊರಟ ಬಿಬಿಎಂಪಿಗೆ ಸಿಲಿಕಾನ್ ಸಿಟಿ ಕಸ ಗುತ್ತಿಗೆದಾರರು ಎಚ್ಚರಿಕೆ ಕೊಟ್ಟಿದ್ದಾರೆ. ಬೆಂಗಳೂರಲ್ಲಿ ಪ್ರತಿನಿತ್ಯ ನಗರದಲ್ಲಿ 5 ಸಾವಿರ ಟನ್ ತಾಜ್ಯ ಸಂಗ್ರಹವಾಗುತ್ತೆ. 1 ಟನ್ ಕಸ ವಿಲೇವಾರಿಗೆ 2,367 ಪಾವತಿ ಮಾಡಲಾಗುತ್ತಿತ್ತು. ಆದ್ರೆ ಇದೀಗ ಹೊರ ರಾಜ್ಯದವರಿಗೆ 1 ಟನ್ ಕಸ ವಿಲೇವಾರಿಗೆ 6,300ಗೆ ಟೆಂಡರ್ ನೀಡಲು ಬಿಬಿಎಂಪಿ ಸಿದ್ಧತೆ ನಡೆಸಿದೆ. ರಾಜ್ಯ ಸರ್ಕಾರ ಹೈದರಾಬಾದ್ ಮೂಲದ ರಾಮ್ ಕೀ ಸಂಸ್ಥೆಗೆ ಕಸ ವಿಲೇವಾರಿ ಗುತ್ತಿಗೆ ನೀಡೋದಕ್ಕೆ ನಿರ್ಧರಿಸಿದೆ, ಆದ್ರೆಈ ಹಿಂದೆ ರಾಮ್ ಕಿ ಸಂಸ್ಥೆ ಕಳಪೆ ಸೇವೆಯಿಂದ ಬ್ಲಾಕ್ ಲಿಸ್ಟ್‌ ಸೇರಿದೆ. ಹೀಗಾಗಿ ಸರ್ಕಾರ ಹಾಗೂ ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರೋ ಗುತ್ತಿಗೆದಾರರು, ಕೂಡಲೇ ಹೊಸ ಕಸದ ಗುತ್ತಿಗೆ ಟೆಂಡರ್ ರದ್ದು ಮಾಡಬೇಕು. ಇಲ್ಲವಾದ್ರೆ, ಸೆಪ್ಟೆಂಬರ್ 5 ರಿಂದ ನಗರದಲ್ಲಿ ಕಸ ವಿಲೇವಾರಿ ಮಾಡೋದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ