ಬಿಬಿಎಂಪಿ ಖಾತೆಗೆ ಕನ್ನ ಹಾಕಿದ ಕಿಲಾಡಿ ಸಿಬಂದಿ

ಗುರುವಾರ, 11 ನವೆಂಬರ್ 2021 (19:01 IST)
ಸಾಮಾನ್ಯ ಡಾಟಾ ಎಂಟ್ರಿ ಆಪರೇಟರ್. ಬೆಂಗಳೂರು ಮಹಾನಗರ ಪಾಲಿಕೆ ಖಾತೆಗೆ ಜಮೆಯಾಗಬೇಕಿದ್ದ 67 ಲಕ್ಷ ರೂ. ಹಣವನ್ನು ಯಾಮಾರಿಸಿ ಸಿಕ್ಕಿಬಿದ್ದಿದ್ದಾನೆ. ಆನ್‌ಲೈನ್‌ ಪರವಾನಗಿ ಪಡೆಯುವ ಸಂಬಂಧ ಅರ್ಜಿದಾರರು ಕಟ್ಟಿದ ಹಣದಲ್ಲಿ 67 ಲಕ್ಷ ರೂ.ಬೆಂಗಳೂರು ನಾಗರಿಕ ಸಂಸ್ಥೆಯ ಮುಖ್ಯ ಲೆಕ್ಕ ಪರಿಶೋಧಕರು 2014-15, 2015-16, 2016-17, ಮತ್ತು 2017-18 ರ ಆರ್ಥಿಕ ವರ್ಷಗಳ ಲೆಕ್ಕಪರಿಶೋಧನೆ ಮಾಡಿದ್ದಾರೆ. ಲೆಕ್ಕಪರಿಶೋಧನೆಯ ಪ್ರಕ್ರಿಯೆಯಲ್ಲಿ, ಆರೋಪಿ ಡೇಟಾ-ಎಂಟ್ರಿ ಆಪರೇಟರ್ ಬಿಬಿಎಂಪಿ ಆಯುಕ್ತರ ಬ್ಯಾಂಕ್ ಖಾತೆಗೆ ಶುಲ್ಕ, ದಂಡ, ರವಾನೆ ಮತ್ತು ಡಿಡಿಗಳನ್ನು ಜಮಾ ಮಾಡದೇ ಮೋಸ ಮಾಡಿರುವುದನ್ನು ಪತ್ತೆ ಮಾಡಿದ್ದಾರೆ. ಬೊಮ್ಮನಹಳ್ಳಿ ವಲಯದ ಆರೋಗ್ಯಾಧಿಕಾರಿ ಡಾ.ನಾಗೇಂದ್ರ, ಅಕ್ಟೋಬರ್ 12 ರಂದು ಬಿಬಿಎಂಪಿ ವಿಶೇಷ ಆಯುಕ್ತರು (ಹಣಕಾಸು) ನಡೆಸಿದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ. ಅದರಂತೆ ಡಾಟಾ ಎಂಟ್ರಿ ಅಪರೇಟರ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ