ಬಿಬಿಎಂಪಿ ಕಾಯ್ದೆ -2020ರ ಅನ್ವಯ ಪಾಲಿಕೆ ಅಧಿಕಾರಿಗಳು ನಗರದಲ್ಲಿ ಮನೆಯಲ್ಲಿ ಸಾಕುವ ನಾಯಿಗಳಿಗೆ ಲೈಸೆನ್ಸ್ ಕಡ್ಡಾಯ ಹಾಗೂ ಮಾಲೀಕರು ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡುವ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.
ಈ ಕುರಿತು ಮಾತನಾಡಿದ ಬಿಬಿಎಂಪಿ ಮುಖ್ಯ ಅಯುಕ್ತ ಗೌರವ್ ಗುಪ್ತಾ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆದಿದ್ದು ಅಂತಿಮ ನಿರ್ಧಾರವಾಗಿಲ್ಲ ಎಂದರು.
ಈಗಾಗಲೇ 2017ರಿಂದ ಬೆಂಗಳೂರಲ್ಲಿ ಸಾಕು ನಾಯಿಗಳ ನೋಂದಣಿ ಕಾರ್ಯವನ್ನು ಬಿಬಿಎಂಪಿ ಮಾಡುತ್ತಿದೆ. ನಗರದಲ್ಲಿ ಸುಮಾರು 80 ಸಾವಿರ ಸಾಕು ನಾಯಿಗಳು ಇವೆಯೆಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.