ಮಾರ್ಷಲ್‌ಗಳ ಅವಶ್ಯಕತೆ ಬಗ್ಗೆ ಪರೀಶಿಲನೆಗೆ ಮುಂದಾದ ಬಿಬಿಎಂಪಿ

ಗುರುವಾರ, 7 ಡಿಸೆಂಬರ್ 2023 (15:21 IST)
ಘನತಾಜ್ಯ ಇಂದಿರಾ ಕ್ಯಾಂಟಿನ್ ವಿಭಾಗದ ಮಾರ್ಷಲ್‌ಗಳ ಅವಶ್ಯಕತೆಗಳ ಪರೀಶಿಲನೆಗೆ ಬಿಬಿಎಂಪಿ ಮುಂದಾಗಿದೆ. 750ಕ್ಕೂ ಹೆಚ್ಚು ಮಾರ್ಷಲ್ ಗಳು ಘನತಾಜ್ಯ ವಿಭಾಗ ,ಇಂದಿರಾಕ್ಯಾಂಟಿನ್ ವಿಭಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಘನತಾಜ್ಯ ವಿಭಾಗಕ್ಕೆ ಮತ್ತು  ಇಂದಿರಾಕ್ಯಾಂಟಿನ್ ವಿಭಾಗಕ್ಕೆ ಮಾರ್ಷಲ್‌ಗಳನ್ನ ಬಳಸುತ್ತಿರುವುದು ವಿರೋದಕ್ಕೆ ಕಾರಣವಾಗಿತ್ತು.ಈ ಮಾರ್ಷಲ್‌ಗಳಿಂದಾಗಿ ಬಿಬಿಎಂಪಿಗೆ ನಷ್ಟವಾಗ್ತಿದೆ ಎಂದು ಆರೋಪಿಸಿ‌ ಎನ್ ಆರ್ ರಮೇಶ್ ಪತ್ರ ಬರೆದಿರುವುದರ ಬಗ್ಗೆ ಬಿಬಿಎಂಪಿ ಪರೀಶಿಲನೆಗೆ  ಮುಂದಾಗಿದೆ.
 
ಬಿಬಿಎಂಪಿಯಿಂದ ಮಾರ್ಷಲ್ ಅವಶ್ಯಕತೆ ಬಗ್ಗೆ ಪರಿಶೀಲಿಸಲು ಸಮಿತಿ ರಚನೆ ಮಾಡಲಾಗಿದ್ದು.ಆರೋಗ್ಯ ವಿಶೇಷ ಆಯುಕ್ತರ ಅಧ್ಯಕ್ಷತೆಯಲ್ಲಿ  7ಜನರ ಸಮಿತಿ ರಚನೆ ಮಾಡಿದ್ದು,ಒರ್ವ ಸಮನ್ವಯಾಧಿಕಾರಿ ಮತ್ತು 5 ಜನರ ಸದಸ್ಯರನ್ನೋಳಗೊಂಡಿರುವ ಸಮಿತಿ,ವಿಶೇಷ ಆಯುಕ್ತ( ಆರೋಗ್ಯ) ಅಧ್ಯಕ್ಷ ,ವಿಶೇಷ ಆಯುಕ್ತ (ಆಡಳಿತ) ಸದಸ್ಯರು,ವಿಶೇಷ ಆಯುಕ್ತ (ಹಣಕಾಸು) ಸದಸ್ಯರು,ವಿಶೇಷ ಆಯುಕ್ತ (ಯೋಜನೆ) ಸದಸ್ಯರು ,ಜಂಟಿ ಆಯುಕ್ತ(ಘ ತಾ ‌ನಿ)ಸದಸ್ಯರು,ಉಪ‌ ಆಯುಕ್ತರು (ಆಡಳಿತ) ಸಮನ್ವಯಾಧಿಕಾರಿ ,ಮುಖ್ಯ ಆರೋಗ್ಯಾಧಿಕಾರಿ (ಸಾ.ಆ)ಸದಸ್ಯರು,ಮುಖ್ಯ ಆಯುಕ್ತರ ಆದೇಶಾನುಸಾರ ಉಪ ಆಯುಕ್ತರಿಂದ ಆದೇಶ ಹೊರಡಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ