ಮಹಿಳಾ ವಿಶ್ವಕಪ್‌: ತಂಡದ ಆಟಗಾರ್ತಿಯರಿಗೆ ಬಿಸಿಸಿಐನಿಂದ ಬಂಪರ್ ಕೊಡುಗೆ

ಶನಿವಾರ, 22 ಜುಲೈ 2017 (15:58 IST)
ಮಹಿಳಾ ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ತಂಡದ ಆಟಗಾರರಿಗೆ ತಲಾ 50 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಬಿಸಿಸಿಐ ಘೋಷಿಸಿದೆ.
 
ಮಹಿಳಾ ಆಟಗಾರ್ತಿಯರಿಗೆ ಬಿಸಿಸಿಐನಿಂದ ಬಂಪರ್ ಕೊಡುಗೆ ಘೋಷಿಸಿದ್ದು, ಆಟಗಾರ್ತಿಯರಿಗೆ ತಲಾ 50 ಲಕ್ಷ ರೂ. ಸಪೋರ್ಟಿಂಗ್ ಸ್ಠಾಫ್‌ಗೆ 25 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ತಿಳಿಸಿದೆ.
 
ಭಾರತದ ಮಹಿಳಾ ತಂಡ ಸೆಮಿಫೈನಲ್ ಪಂದ್ಯದಲ್ಲಿ ಆರು ಬಾರಿ ಚಾಂಪಿಯನ್ ಆಸ್ಟ್ರೇಲಿಯಾದ ಮಹಿಳಾ ತಂಡವನ್ನು ಸೋಲಿಸಿ ಫೈನಲ್‌ಗೆ ಲಗ್ಗೆಯಿಟ್ಟಿದೆ.
 
ನಾಳೆ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ತಂಡ ಎದುರಾಳಿ ಇಂಗ್ಲೆಂಡ್ ತಂಡದ ವಿರುದ್ಧ ಸೆಣಸಾಟ ನಡೆಸಲಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ