ಭಾರತೀಯ ಸಿಬ್ಬಂದಿಗಳಿಗೆ ಇಂಗ್ಲಿಷ್ ಬರಲ್ಲ: ಹೀಯಾಳಿಸಿದ ಬ್ರಿಟಿಷ್ ಮಹಿಳೆಯ ಜಾಡಿಸಿದ ನೆಟ್ಟಿಗರು
ಲಕ್ಕಿ ವೈಟ್ ಎಂಬ ಮಹಿಳೆ ತನ್ನ ಸೋಷಿಯಲ್ ಮೀಡಿಯಾ ಎಕ್ಸ್ ಪುಟದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ಇದರಲ್ಲಿ ಹೀಥ್ರೋ ವಿಮಾನ ನಿಲ್ದಾಣದಲ್ಲಿರುವ ಸಿಬ್ಬಂದಿಗಳ ಬಗ್ಗೆ ಟೀಕೆ ಮಾಡಿದ್ದಾರೆ. ಇಲ್ಲಿ ಇರೋರೆಲ್ಲಾ ಇಂಗ್ಲಿಷ್ ಬಾರದ ಏಷ್ಯಾ/ಭಾರತೀಯರು ಎಂದು ಟೀಕಿಸಿದ್ದಾರೆ.
ಇಲ್ಲಿ ಎಲ್ಲಿ ನೋಡಿದರೂ ಭಾರತೀಯ ಅಥವಾ ಏಷ್ಯನ್ ಮೂಲದ ಸಿಬ್ಬಂದಿಗಳೇ ಇದ್ದರು. ನಾನು ಅವರಲ್ಲಿ ಇಂಗ್ಲಿಷ್ ನಲ್ಲಿ ಮಾತನಾಡಿ ಎಂದೆ. ಅದಕ್ಕೆ ಅವರು ರೇಸಿಷ್ಟ್ ಕಾರ್ಡ್ ಪ್ಲೇ ಮಾಡ್ತಾರೆ. ನೀವು ನಮಗೆ ಅವಮಾನ ಮಾಡ್ತಿದ್ದೀರಿ ಎಂದರು.
ಅವರಿಗೂ ಗೊತ್ತು. ನಾನು ಸರಿಯಾಗಿ ಹೇಳಿದ್ದೇನೆ ಎಂದು. ಆದರೆ ತಮ್ಮನ್ನು ರಕ್ಷಿಸಿಕೊಳ್ಳಲು ಸಂತ್ರಸ್ತರಂತೆ ನಾಟಕವಾಡುತ್ತಿದ್ದರು ಎಂದು ಬರೆದುಕೊಂಡಿದ್ದರು. ಇದಕ್ಕೆ ನೆಟ್ಟಿಗರು ತಿರುಗೇಟು ನೀಡಿದ್ದಾರೆ. ಅವರಿಗೆ ಮಾತನಾಡಲು ಒಂದೇ ಒಂದು ಶಬ್ಧವೂ ಇಂಗ್ಲಿಷ್ ಬರಲ್ಲ ಎಂದರೆ ನೀವು ರೇಸಿಸ್ಟ್ ಎಂದು ಅವರು ಇಂಗ್ಲಿಷ್ ನಲ್ಲಿ ಹೇಗೆ ಹೇಳಿದ್ರು? ಅವರು ಹೇಳಿದ್ದು ನಿಮಗೆ ಹೇಗೆ ಇಷಟವಾಯಿತು ಎಂದು ಪ್ರಶ್ನಿಸಿದ್ದಾರೆ. ನಿಮ್ಮ ಆರೋಪಗಳಿಗೆ ಪುರಾವೆ ಏನಿದೆ ಎಂದೂ ಪ್ರಶ್ನಿಸುತ್ತಿದ್ದಾರೆ.