ಪೊಲೀಸರು ಬರ್ತಾರೆ ವ್ಹೀಲ್ ಲಾಕ್ ಮಾಡಿ ಹೋಗ್ತಾರೆ.ನಂಬರ್ ಪ್ಲೇಟ್ ನಲ್ಲಿ ಸ್ವಲ್ಪ ಡೌಟ್ ಬಂದ್ರೂ ನಿಂತಲ್ಲೇ ಬೈಕ್ ಕಾರು ಲಾಕ್ ಆಗುತ್ತೆ.ಗಾಡಿ ಮೇಲೆ ಬೀಳೋ ಫೈನ್ ತಪ್ಪಿಸೋಕೆ ಆಟವಾಡೋರೆ ಎಚ್ಚರ.ಅಂತವರನ್ನೇ ಸಂಚಾರಿ ಪೊಲೀಸರು ಟಾರ್ಗೆಟ್ ಮಾಡಿದಾರೆ.ನಗರದಲ್ಲಿ ಹೆಚ್ಚಾಗಿರೋ ದೋಷಪೂರಿತ ನಂಬರ್ ಪ್ಲೇಟ್ ಗಾಡಿಗಳು.ಕೆಲ ಕ್ರಿಮಿನಲ್ ಗಳು ದೋಷಪೂರಿತ ನಂಬರ್ ಪ್ಲೇಟ್ ಬಳಸಿ ಗಾಡಿ ಬಳಕೆ ಮಾಡ್ತಿದ್ದಾರೆ.ಫೇಕ್ ನಂಬರ್ ಪ್ಲೇಟ್, ದೋಷಪೂರಿತ ನಂಬರ್ ಪ್ಲೇಟ್ ಬಳಸಿ ಕೃತ್ಯ ನಡೆಸಲಾಗಿದೆ.ಮತ್ತೊಂದಡೆ ಸ್ಟೈಲಿಷ್ ಆಗಿ ನಂಬರ್ ಪ್ಲೇಟ್ ಹಾಕಿಸಿಕೊಳ್ತಿರೋ ಯುವಕರು.ನಂಬರ್ ಸ್ಟೈಲಿಷ್, ಎಕ್ಸ್‌ಟ್ರಾ ಸ್ಟಿಕ್ಕರ್ ಹಾಕಿಸಿ ಬಳಕೆ ಮಾಡೋರ ಮೇಲೆ ಸಂಚಾರಿ ಪೊಲೀಸರು ಕಣ್ಣಿಟ್ಟಿದ್ದಾರೆ.
ಈಗಾಗಲೇ ಪಶ್ಚಿಮ ವಿಭಾಗದ ಸಂಚಾರಿ ಪೊಲೀಸರು ಕೆಲಸ ಶುರು ಮಾಡಿದ್ದಾರೆ.ಗಾಡಿ ಲಾಕ್ ಮಾಡಿದ್ಮೇಲೆ ಕೋರ್ಟ್ ನಲ್ಲಿಯೇ ಪಡೀಬೇಕು ಗಾಡಿ.ಯಾಕೆ ಆ ರೀತಿ ಸ್ಟಿಕ್ಕರ್ ಹಾಕಿಸಿದ್ದು, ದೋಷಪೂರಿತ ಪ್ಲೇಟ್ ಯಾಕೆ..?ಈ ಎಲ್ಲಾ ಉತ್ತರದ ಜೊತೆಗೆ ಪಕ್ಕಾ ಡಾಕ್ಯುಮೆಂಟ್, ಲೈಸೆನ್ಸ್ ಸಮೇತ ಗಾಡಿ ಈಸ್ಕೊಂಡ್ ಬರ್ಬೇಕು.ಸದ್ಯ ದೋಷಪೂರಿತ ನಂಬರ್ ಪ್ಲೇಟ್ ಬಳಸೋ ವಾಹನ ಸವಾರರ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ.