ಅಹ್ಮದ್ ಪಟೇಲ್, ಸೋನಿಯಾ ಗಾಂಧಿ ಕರೆ ಮಾಡಿದ್ದು ಮುಗಿದ ಅಧ್ಯಾಯ: ಎಸ್.ಎಂ.ಕೃಷ್ಣ
ಸೋಮವಾರ, 30 ಜನವರಿ 2017 (19:25 IST)
ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವ ಮುನ್ನ ಯಾರೊಂದಿಗೂ ಪೂರ್ವಭಾವಿ ಸಮಾಲೋಚನೆ ನಡೆಸಿಲ್ಲ. ಇನ್ನು ಮುಂದೆ ಸಮಾಲೋಚನೆ ನಡೆಸುತ್ತೇನೆ. ಬೇರೆ ಪಕ್ಷ ಸೇರುವ ಕುರಿತು ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ತಿಳಿಸಿದರು.
ಮಂಡ್ಯ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ದಿನ ನನ್ನನ್ನು ಸಹಿಸಿಕೊಂಡ ಅಭಿಮಾನಿಗಳಿಗೆ ಅಭಾರಿಯಾಗಿರುತ್ತೇನೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಹಾಗೂ ಎಐಸಿಸಿ ಅಧ್ಯಕೆ ಸೋನಿಯಾ ಗಾಂಧಿ ಕರೆ ಮಾಡಿದ್ದು ಮುಗಿದ ಅಧ್ಯಾಯ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಜೊತೆ ಚರ್ಚಿಸಿದ್ದೇನೆ ಅನ್ನುವುದು ಕೇವಲ ಊಹಾಪೋಹ ಎಂದು ಸ್ಪಷ್ಟಪಡಿಸಿದರು.
ಇವತ್ತು ನಾನು ರಾಜಕೀಯದಲ್ಲಿ ಎಷ್ಟೇ ಎತ್ತರಕ್ಕೆ ಬೆಳಿದಿದ್ದರು ಅಕಕ್ಕೆ ಮದ್ದೂರ ಜನರ ಬೆಂಬಲವೇ ಕಾರಣ. ಮದ್ದೂರು ಜನತೆಗೆ ನಾನು ಸದಾ ಋಣಿಗಾಗಿರುತ್ತೇನೆ ಎಂದರು.
ಹೊಸ ಪಕ್ಷ ಕಟ್ಟುವಂತೆ ಮಾದೇಗೌಡರು ಸಲಹೆ ನೀಡಿದ್ದಾರೆ. ಆದರೆ, ಅದು ಅವರ ಆಲೋಚನೆ ನನ್ನದಲ್ಲ. ಕಾರ್ಯಕರ್ತರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ತಿಳಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ