ಬೆಳಗಾವಿಯಲ್ಲಿ ಇಂದಿನಿಂದ ಲೆಕ್ಕಕ್ಕೆ ಚಳಿಗಾಲದ ಅಧಿವೇಶನ, ಆದರೆ ನಡೆಯೋದು ಅನುಮಾನ

Krishnaveni K

ಸೋಮವಾರ, 9 ಡಿಸೆಂಬರ್ 2024 (08:47 IST)
ಬೆಳಗಾವಿ: ಬೆಳಗಾವಿಯಲ್ಲಿ ಇಂದಿನಿಂದ ವಿಧಾನಭೆಯ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಆದರೆ ಈ ಅಧಿವೇಶನದ ಕಲಾಪಗಳು ಸುಗಮವಾಗಿ ನಡೆಯುವುದು ಅನುಮಾನವಾಗಿದೆ. ಅದಕ್ಕೆ ಅನೇಕ ಕಾರಣಗಳಿವೆ.

ಉತ್ತರ ಕರ್ನಾಟಕದ ಸಮಸ್ಯೆಗಳು ಕಡೆಗಣಿಸಲ್ಪಡಬಾರದು ಎಂಬ ಕಾರಣಕ್ಕೆ ಚಳಿಗಾಲದ ಅಧಿವೇಶನವನ್ನು ಬೆಳಗಾವಿ ಸೌಧದಲ್ಲಿ ನಡೆಸಲಾಗುತ್ತದೆ. ಆದರೆ ಪ್ರತೀ ಬಾರಿಯೂ ಅಧಿವೇಶನದ ಸಂದರ್ಭದಲ್ಲಿ ಉಪಯುಕ್ತ ಚರ್ಚೆಗಳು, ನಿರ್ಧಾರಗಳಿಗಿಂತ ಗಲಭೆಗಳೇ ಹೆಚ್ಚಾಗುತ್ತವೆ.

ಈ ಅಧಿವೇಶನದಲ್ಲೂ ಗಲಭೆಯೇ ಹೆಚ್ಚಾಗುವ ಲಕ್ಷಣಗಳಿವೆ. ವಕ್ಫ್ ನೋಟಿಫಿಕೇಶನ್ ವಿವಾದ, ಬಾಣಂತಿಯರ ಸಾವು ಪ್ರತಿ ಪಕ್ಷ ಬಿಜೆಪಿಗೆ ಅಸ್ತ್ರವಾಗಿದೆ. ಇದೇ ವಿಚಾರವನ್ನಿಟ್ಟುಕೊಂಡು ಈ ಬಾರಿ ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲಿ ಬಿಜೆಪಿ ತಂತ್ರ ಹೆಣೆದಿದೆ. ಇದಕ್ಕೆ ಜೆಡಿಎಸ್ ಕೂಡಾ ಸಾಥ್ ನೀಡಲಿದೆ.

ವಿಪಕ್ಷಗಳಿಗೆ ಠಕ್ಕರ್ ಕೊಡಲು ಇತ್ತ ಕಾಂಗ್ರೆಸ್ ಕೂಡಾ ಕೊವಿಡ್ ಹಗರಣದ ತನಿಖೆಯ ಬಗ್ಗೆ ಪ್ರಸ್ತಾಪ ಮಾಡಲಿದೆ. ಇದು ಎರಡೂ ಪಕ್ಷಗಳ ನಡುವೆ ಕೋಲಾಹಲಕ್ಕೆ ಕಾರಣವಾಗುವುದಂತೂ ಖಚಿತ. ಇದರಿಂದಾಗಿ ಸುಗಮವಾಗಿ ಕಲಾಪ ನಡೆಯುವುದು ಅನುಮಾನವಾಗಿದ್ದು, ಕೈಗೊಳ್ಳಬೇಕಾದ ಎಷ್ಟೋ ನಿರ್ಣಯಗಳು, ಜನರ ಸಮಸ್ಯೆಗಳು ಸದ್ದಿಲ್ಲದೇ ತೆರೆಮರೆಗೆ ಹೋಗುವ ಸಾಧ್ಯತೆಯೇ ಹೆಚ್ಚು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ