ಅತಿಥಿ ಉಪನ್ಯಾಸಕರಿಂದ ಬೆಳಗಾವಿ ಚಲೋ

ಮಂಗಳವಾರ, 11 ಡಿಸೆಂಬರ್ 2018 (18:24 IST)
ಮೈತ್ರಿ ಸರಕಾರ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಸುತ್ತಿದ್ದರೆ, ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹಲವು ಸಂಘಟನೆಗಳು, ಸಮಿತಿಗಳು ಬೆಳಗಾವಿ ಚಲೋ ಹಮ್ಮಿಕೊಳ್ಳುತ್ತಿವೆ.

ಅತಿಥಿ ಉಪನ್ಯಾಸಕರ ಸೇವಾ ಭದ್ರತೆಗಾಗಿ ಆಗ್ರಹಿಸಿ ಡಿ.17 ರಂದು ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗಿದೆ. 
ರಾಜ್ಯದ 412 ಸರಕಾರಿ ಪ್ರಧಮ ದರ್ಜೆ ಕಾಲೇಜುಗಳಲ್ಲಿ 2000 ರಿಂದ 2018 ರವರಗೆ ಅತಿಥಿ ಉಪನ್ಯಾಸಕರಾಗಿ ಕನಿಷ್ಟ ಗೌರವಧನದ ಅಧಾರದ ಮೇಲೆ ಸೇವೆ ಸಲ್ಲಿಸುತ್ತಾ ಬರಲಾಗಿದೆ. ಹಲವು ವರ್ಷಗಳ ಹೋರಾಟದ ಫಲವಾಗಿ ಡಿ.4 2018 ರಂದು ಉನ್ನತ ಶಿಕ್ಷಣ ಪರಿಷತ್ ಸಭೆಯಲ್ಲಿ 25000 ವೇತನ ನೀಡಲು ಅಗ್ರಹಿಸಿದಾಗ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೆಗೌಡ ತಾತ್ವಿಕವಾಗಿ ಒಪ್ಪಿಗೆಯನ್ನು ನೀಡಿದ್ದರು.

ಅಲ್ಲದೇ ಚುನಾವಣೆಯ ಪ್ರಣಾಳಿಕೆ ಘೋಷಿಸಿಕೊಂಡಿರುವಂತೆ ಜಾರಿಗೊಳಿಸಲು ಆಗ್ರಹಿಸಿ ಸರಕಾರಕ್ಕೆ ಮೂರು ದಿನಗಳ ಗಡುವು ನೀಡಿದ್ದು, ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಅತಿಥಿ ಉಪನ್ಯಾಸಕರ ಆಗ್ರಹಿಸಿದ್ದಾರೆ. ಸರಕಾಋ ನಿರ್ಲಕ್ಷ್ಯ  ವಹಿಸಿದಲ್ಲಿ ಡಿ.17 ರಂದು ಬಳ್ಳಾರಿ ಜಿಲ್ಲೆಯ ಆರುನೂರು ಅತಿಥಿ ಉಪನ್ಯಾಸಕರಿಂದ ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗುತ್ತದೆ ಎಂದು ಅತಿಥಿ ಉಪನ್ಯಾಸಕರ ಸಮನ್ವಯ ಸಮಿತಿ ಅಧ್ಯಕ್ಷ  ಟಿ.ದುರುಗಪ್ಪ ತಿಳಿಸಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ