ಬೆಂಗಳೂರಲ್ಲಿ ಬಾಂಗ್ಲಾದವರ ವೇಶ್ಯಾವಾಟಿಕೆ
ಬಾಂಗ್ಲಾದಿಂದ ಬಂದು ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದವರ ಮೇಲೆ ಬೆಂಗಳೂರು ಸಿಸಿಬಿ ಪೊಲೀಸರು ಎರಡು ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಿದ್ಧಾರೆ. ಕೆಂಗೇರಿ, ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು. ಬಾಂಗ್ಲಾದಿಂದ ಅತಿಕ್ರಮವಾಗಿ ಬಂದು ಆರೋಪಿಗಳು ನೆಲೆಸಿದ್ದರು. ತನ್ವೀರ್ ಮಂಡಲ್, ಅಖ್ತರ್ ಮಂಡಲ್, ಇಲಾಹಿ, ಬಿಸ್ತ್ವಿ ಸೇರಿದಂತೆ ಎಂಟು ಪಿಂಪ್ಗಳನ್ನು ಪೊಲೀಸರು ಬಂಧಿಸಿದ್ಧಾರೆ. ಕೆಂಗೇರಿಯ ವಿನಾಯಕ ನಗರ ಹಾಗೂ ಬ್ಯಾಡರಹಳ್ಳಿ ಭಾಗದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು. ಕೇವಲ ಕೆಲಸ ಅಂತ ಬಂದ ಬಾಂಗ್ಲಾ ದೇಶಿಗಳು ಬೆಂಗಳೂರಿಗೇ ಗುನ್ನ ಇಡ್ತಿದ್ದರು. ಬಾಂಗ್ಲಾ ದೇಶದಿಂದಲೇ ಯುವತಿಯರನ್ನ ಬೆಂಗಳೂರಿಗೆ ಅಕ್ರಮವಾಗಿ ಸಾಗಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಸದ್ಯ ಕೆಂಗೇರಿ ಹಾಗೂ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಂಟು ಆರೋಪಿಗಳ ಪೂರ್ವಾಪರವನ್ನು ಪೊಲೀಸರು ಕಲೆಹಾಕುತ್ತಿದ್ಧಾರೆ