ಈದ್ ಆಚರಣೆ ವೇಳೆ ಹೆಲ್ಮೆಟ್ ಇಲ್ಲದೇ ತ್ರಿಬಲ್ ರೈಡಿಂಗ್ ವಿಡಿಯೋ ವೈರಲ್: ನೆಟ್ಟಿಗರು ಹೇಳಿದ್ದು ಹೀಗೆ

Sampriya

ಸೋಮವಾರ, 31 ಮಾರ್ಚ್ 2025 (19:34 IST)
Photo Courtesy X
ಬೆಂಗಳೂರು: ಈದ್ ಮಿಲಾದ್ ಸಂಭ್ರಮಾಚರಣೆ ವೇಳೆ ಹೆಲ್ಮೆಟ್ ಧರಿಸದೆಯೇ ಸಾಕಷ್ಟು ಮಂದಿ ತ್ರಿಬಲ್ ರೈಡ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ಕೆಲವರು ಪ್ರಶ್ನಿಸಿ, ಸಂಚಾರ ನಿಯಮಗಳು ಹಿಂದೂಗಳಿಗೆ ಮಾತ್ರವೇ ಎಂದು ಪ್ರಶ್ನೆ ಮಾಡಿದ್ದಾರೆ.

ಇಂದು ಬೆಂಗಳೂರಿನ ಹಲವೆಡೆ ಅದ್ಧೂರಿಯಾಗಿ ಈದ್‌ ಮಿಲಾದ್‌ ಆಚರಿಸಲಾಗಿದೆ. ನಗರದ ಒಂದು ಪ್ರದೇಶದಲ್ಲಿ ಟ್ರಾಫಿಕ್ ಪೊಲೀಸರ ಎದುರೇ ಮುಸ್ಲಿಮರು ತ್ರಿಬಲ್ ರೈಡ್ ಮಾಡಿದ್ದಾರೆ. ತಲೆಗೆ ಟೋಫಿ ಹಾಕಿಕೊಂಡು ಈದ್ ಸಂಭ್ರಮದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿತ್ತಿದೆ.

ಅಲ್ಲೇ ಇದ್ದ ವ್ಯಕ್ತಿಯೊಬ್ಬರು ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.  

ವಿಡಿಯೋ ಹಂಚಿ ಬರೆದುಕೊಂಡ ಅವರು, ಬೆಂಗಳೂರಿನಲ್ಲಿ ಹೆಲ್ಮೆಟ್ ಇಲ್ಲದ ದಿನ, ತಲೆಬುರುಡೆಗೆ ಕ್ಯಾಪ್ ಸಾಕು

ಸಂಚಾರ ನಿಯಮಗಳು ಅವರಿಗೆ ತಮಾಷೆಯಾಗಿವೆ ಮತ್ತು ಅಂತಿಮವಾಗಿ ಅಮಾಯಕರು ಬಳಲುತ್ತಿದ್ದಾರೆ

ದ್ವಿಚಕ್ರ ವಾಹನದಲ್ಲಿ ಮೂರು ಜನರು ಸವಾರಿ ಮಾಡಬಹುದೇ? ಸಂಚಾರ ನಿಯಮಗಳು ಮತ್ತು ನಿಯಮಗಳು ಹಿಂದೂಗಳಿಗೆ ಮಾತ್ರ

No helmet day in Bengaluru, skull cap is enough

Traffic Rules are a Joke for them and eventually innocent people suffer

Can three people ride on a two wheeler? Traffic rules and regulations are only for Hindus @blrcitytraffic pic.twitter.com/J9ZZTsGidH

— DSH MAX (@team_dsh_1) March 31, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ