ರಾತ್ರಿಯಿಡೀ ಸುರಿದ ಮಳೆಗೆ ಬೆಂಗಳೂರು ಒದ್ದೆ: ಮೊದಲ ಮಳೆಗೇ ಆದ ಅವಾಂತರಗಳೆಷ್ಟು

Krishnaveni K

ಮಂಗಳವಾರ, 14 ಮೇ 2024 (09:43 IST)
ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ಮಳೆಯ ಅಬ್ಬರ ಜೋರಾಗಿದೆ. ನಿನ್ನೆ ರಾತ್ರಿಯಿಡೀ ಸುರಿದ ಮಳೆಗೆ ಬೆಂಗಳೂರು ಒದ್ದೆಯಾಗಿದೆ. ಇಂದೂ ಕೂಡಾ ಮಳೆ ಮುಂದುವರಿಯುವ ನಿರೀಕ್ಷೆಯಿದೆ.

ನಿನ್ನೆ ಹಗಲು ಸುಮ್ಮನೇ ಕೂತಿದ್ದ ವರುಣ ಕತ್ತಲಾಗುತ್ತಿದ್ದಂತೇ ಸುರಿಯಲು ಆರಂಭಿಸಿದ್ದಾನೆ. ಗುಡುಗು, ಮಿಂಚಿನ ಜೊತೆಗೆ ಭಾರೀ ಮಳೆಯಾಗಿದೆ. ಸತತ ಮಳೆಯಿಂದಾಗಿ ಬೆಂಗಳೂರು ವಾತಾವರಣ ತಂಪಾಗಿದ್ದು ಇಂದು ಸರಾಸರಿ 24 ಡಿಗ್ರಿ ತಾಪಮಾನವಿದೆ. ಮಧ್ಯಾಹ್ನದ ನಂತರ ಮತ್ತೆ ಮಳೆಯಾಗುವ ಸೂಚನೆಯಿದೆ.

ಮುಂದಿನ ಒಂದು ವಾರದವರೆಗೆ ಮತ್ತೆ ಮಳೆಯಾಗುವ ಸಾಧ‍್ಯತೆಯಿದೆ. ಮೊದಲ ಮಳೆಗೇ ಬೆಂಗಳೂರಿನಲ್ಲಿ ಹಲವು ಅವಾಂತರಗಳಾಗಿವೆ. ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ಮರ ಧರೆಗುರುಳಿದೆ. ಕೆಲವೆಡೆ ಅಂಡರ್ ಪಾಸ್ ಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ಮಳೆಯ ಅವಾಂತರಗಳನ್ನು ತಪ್ಪಿಸಲು ಬಿಬಿಎಂಪಿ ಸಭೆ ನಡೆಸಿ ಮಳೆ ನೀರಿನ ನಿರ್ವಹಣೆ, ಮಳೆಗಾಲಕ್ಕೆ ಕೈಗೊಳ್ಳಬೇಕಾದ ಸಿದ್ಧತೆಗಳ ಬಗ್ಗೆ ಚರ್ಚೆ ನಡೆಸಿದೆ. ಪ್ರತೀ ಬಾರಿಯೂ ಮಳೆ ಬಂದಾಗ ನೀರು ನುಗ್ಗಿ ಬಿಬಿಎಂಪಿಗೆ ಜನ ಹಿಡಿಶಾಪ ಹಾಕುತ್ತಲೇ ಇರುತ್ತಾರೆ. ಈ ಬಾರಿಯಾದರೂ ಬಿಬಿಎಂಪಿ ಮಳೆ ನಿರ್ವಹಣೆಗೆ ತಕ್ಕ ಕ್ರಮ ಕೈಗೊಳ್ಳಲಿ ಎಂಬುದು ಜನರ ಆಶಯ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ