ಹೊಸವರ್ಷದ ಸಂಭ್ರಮದಲ್ಲಿ ಮೈಮರೆಯದಿರುವಂತೆ ಬೆಸ್ಕಾಂ ಎಚ್ಚರಿಕೆ

ಭಾನುವಾರ, 31 ಡಿಸೆಂಬರ್ 2023 (21:00 IST)
ಹೊಸ ವರ್ಷದ ಸಂಭ್ರಮದಲ್ಲಿ ಎಚ್ಚರದಿಂದ ಇರುವಂತೆ ಬೆಸ್ಕಾಂ ಮನವಿ ಮಾಡಿದೆ.ಪ್ರತಿವರ್ಷದಂತೆ ಈ ವರ್ಷವೂ ನಗರದಲ್ಲಿ ನ್ಯೂ ಇಯರ್ ಸೆಲೆಬ್ರೇಷನ್ ಜೋರಾಗಿದೆ.ನಗರದೆಲ್ಲಡೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ ಹೀಗಾಗಿ ಜನ ಎಚ್ಚರದಿಂದ ಇರಬೇಕು .ಹೀಗಾಗಿ ಹೀಗಾಗಿ ಜನರು ಜಾಗೃಕತೆ ಇಂದ ಓಡಾಡುವಂತೆ ಬೆಸ್ಕಾಂ ಜನರಲ್ಲಿ ಅರಿವು ಮೂಡಿಸುತ್ತಿದ್ದೆ .ನಗರದ ಅಪಾಯಕಾರಿ ಸ್ಥಳಗಳಲ್ಲಿ ಬ್ಯಾನರ್ ಹಾಕಿ  ಬೆಸ್ಕಾಂ ಅಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ.
 
ಟ್ರಾನ್ಸ್ಫರ್ ಮರ, ಹಾಗೂ ವಿದ್ಯುತ್ ಕಂಬಗಳಿಂದ ಅಂತರ ಕಾದುಕೊಳ್ಳುವಂತೆ ಮನವಿ ಮಾಡಲಾಗಿದೆ.ಬರೀಗೈಯಲ್ಲಿ ವಿದ್ಯುತ್ ದೀಪಗಳು ಮುಟ್ಟಬಾರದು ಹಾಗೆ ಕಂಬಗಳಿಂದ ದೂರ ವಿರುವಂತೆ ಎಚ್ಚರಿಕೆ ನೀಡಲಾಗಿದೆ.ನಗರದ ಹಲವೆಡೆ ಬ್ಯಾನರ್ ಕಟ್ಟಿ ಬೆಸ್ಕಾಂ ಅಧಿಕಾರಿಗಳು ಮಾತ್ರ ಅರಿವು ಮೂಡಿಸಿದ್ದಾರೆ.ಪ್ರಮುಖ ರಸ್ತೆಗಳಾದ ಎಂಜಿ ರಸ್ತೆ, ಕೋರಮಂಗಲ,ಬ್ರಿಗೇಡ್ ರಸ್ತೆಗಳಲ್ಲಿ ಖುದ್ದು ಅಧಿಕಾರಿಗಳೇ ಪರಿಶೀಲನೆ ನಡೆಸಿದ್ದಾರೆ .ಅಪಾಯಕಾರಿ ಸ್ಥಳಗಳಗಳನ್ನ ಸರಿ ಪಡೆಸಿ ಬ್ಯಾನರ್ ಹಾಕಿ ಅರಿವು ಮೂಡಿಸಲಾಗಿದೆ.ಅಪಾಯಕಾರಿ ಅಥವಾ ಬೆಸ್ಕಾಂ ಸಂಬಧಿತ ಸಮಸ್ಯೆಗಳು ಕಂಡುಬದರೆ ಕರೆ ಮಾಡುವತೆ ಸೂಚನೆ ನೀಡಲಾಗಿದೆ.
 
ಬೆಸ್ಕಾಂಗೆ ಸಂಬಧಿಸಿದಂತೆ ವಿದ್ಯುತ್ ಮಾರ್ಗದಲ್ಲಿ ವೈಯರ್ ತುಂಡಾಗಿರುವುದು ಹಾಗೆ ಬೆಂಕಿ ಕಾಣಿಸಿಕೊಂಡಿರುವುದು ಹಾಗೂ ಇತರೆ ಅಪಾಯಕಾರಿ ಸನ್ನಿವೇಷ ಕಂಡು ಬಂದಲ್ಲಿ ಕೂಡಲೆ ಬೆಸ್ಕಾಂ ಸಹಾಯವಾಣಿ ಸಂಖ್ಯೆಕರೆ ಮಾಡುವಂತೆ ಮನವಿ ಮಾಡಲಾಗಿದೆ.ಸಾರ್ವಜನಿಕ ಸಹಾಯವಾಣಿ ತೆಗೆದ ಬೆಸ್ಕಾಂ ಇಲಾಖೆ ಸಹಾಯವಾಣಿ :-1912 ,ಸಹಾಯವಾಣಿ :- 94498 44708 / 94498 74202 ಬೆಸ್ಕಾಂ ಸಂಬಧಿತ ಸಮಸ್ಯೆಗಳು ಕಂಡುಬದರೆ ಸಹಾಯವನಿಗೆ ಕರೆ ಮಾಡುವಂತೆ ಬೆಸ್ಕಾಂ ಮನವಿ ಮಾಡಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ