ಮದ್ಯ ಪ್ರಿಯರೇ ಎಚ್ಚರ! ಮದ್ಯ ಹೋಂ ಡೆಲಿವರಿ ಮಾಡುವುದಾಗಿ ವಂಚನೆ
ಬುಧವಾರ, 22 ಏಪ್ರಿಲ್ 2020 (07:15 IST)
ರಾಯಚೂರು : ಲಾಕ್ ಡೌನ್ ಹಿನ್ನಲೆಯಲ್ಲಿ ಮದ್ಯ ಮಾರಾಟಕ್ಕೆ ಬ್ರೇಕ್ ಬಿದ್ದಿರುವುದನ್ನೇ ಬಂಡವಾಳ ಮಾಡಿಕೊಂಡ ಕೆಲವು ವಂಚಕರು ಆನ್ ಲೈನ್ ನಲ್ಲಿ ಮದ್ಯ ಪ್ರಿಯರನ್ನು ವಂಚಿಸಲು ಮುಂದಾಗಿದ್ದಾರೆ.
ರಾಯಚೂರಿನ ಅಮೃತ ವೈನ್ ಶಾಪ್ ನಿಂದ ಎಲ್ಲಾ ಬ್ರಾಂಡ್ ನ ಮದ್ಯ ಹೋಂ ಡೆಲಿವರಿ ಮಾಡುವುದಾಗಿ ಫೇಸ್ ಬುಕ್ ನಲ್ಲಿ ತಪ್ಪಾದ ವಿಳಾಸ ನೀಡಿ ಜನರನ್ನು ವಂಚಿಸುತ್ತಿದ್ದಾರೆ. ಮೊದಲು ಪೋನ್ ಪೇ ಮೂಲಕ ಖಾತೆಗೆ ಹಣ ಹಾಕುವಂತೆ ಹೇಳಿ ಬಳಿಕ ಮದ್ಯ ನೀಡದೆ ವಂಚಿಸಲು ಮುಂದಾಗಿದ್ದಾರೆ.
ಈ ಬಗ್ಗೆ ಅಬಕಾರಿ ಪೊಲೀಸರು ಸ್ಪಷ್ಟನೆ ನೀಡಿದ್ದು, ಈ ರೀತಿ ವಂಚಿಸುತ್ತಿರುವವರ ಪತ್ತೆಗೆ ಮುಂದಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.