BF.7 ವೈರಸ್ ಸೋಂಕಿತರು ಚೇತರಿಕೆ
ಚೀನಾದಲ್ಲಿ ಕೊರೋನಾ ರೂಪಾಂತರ ವೈರಸ್ ಪತ್ತೆಯಾಗಿದ್ದು, BF.7 ವೈರಸ್ ರೂಪಾಂತರಿ ತಳಿ ಕೇಸ್ ಭಾರತದಲ್ಲೂ ಪತ್ತೆಯಾಗಿತ್ತು. ಇದೀಗ BF.7 ವೈರಸ್ ಸೋಂಕಿಗೆ ತುತ್ತಾಗಿದ್ದ ರೋಗಿಗಳು ಚೇತರಿಕೆ ಕಾಣ್ತಿದ್ದಾರೆ. ಸೋಂಕಿತರು ಗುಣಮುಖರಾಗುತ್ತಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸ್ಖ್ ಮಾಂಡವೀಯ ಹೇಳಿದ್ದಾರೆ. ಇಬ್ಬರು ಸೋಂಕಿತರಿಗೆ ಗುಜರಾತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಚೀನಾಗಿಂತ ಭಾರತದ ಸ್ಥಿತಿ ಭಿನ್ನವಾಗಿದೆ. ಭಾರತಕ್ಕೆ ಬೂಸ್ಟರ್ ಡೋಸ್ ಶಕ್ತಿ ತುಂಬಿದೆ. ಕಳೆದ ವಾರದಿಂದ ಬೂಸ್ಟರ್ ಡೋಸ್ ನೀಡಿಕೆಯಲ್ಲಿ ಹೆಚ್ಚಳವಾಗಿದೆ. ಚೀನಾದಲ್ಲಿ ವ್ಯಾಕ್ಸಿನ್ ಪರಿಣಾಮಕಾರಿಯಾಗಿಲ್ಲ. ಜನರಲ್ಲಿ ಇಮ್ಯುನಿಟಿಯೂ ಕಡಿಮೆ ಇದೆ. ವಯೋವೃದ್ಧರು ಲಸಿಕೆ ಪಡೆದಿಲ್ಲ. ಆದರೆ ಭಾರತದಲ್ಲಿ 220 ಕೋಟಿ ವ್ಯಾಕ್ಸಿನ್ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಹೇಳಿದ್ದಾರೆ.