ಬೆಂಗಳೂರು : ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ರಾಹುಲ್ ಗಾಂಧಿ ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ.
ಅದಕ್ಕಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆ ನಡೆಯುತ್ತಿದೆ. ರಾಜ್ಯದಲ್ಲೂ ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 14ರ ವರೆಗೆ ರಾಹುಲ್ ಪಾದಯಾತ್ರೆ ನಡೆಯುತ್ತಿದೆ.
ಫುಲ್ಜೋಶ್ನಲ್ಲಿರೋ ರಾಹುಲ್ಗಾಂಧಿ ಧಾರಾಕಾರ ಮಳೆಯಲ್ಲೂ ಉತ್ಸಾಹ ಕಳೆದುಕೊಳ್ಳದೇ ಮುನ್ನುಗ್ಗುತ್ತಿದ್ದಾರೆ. ರಾಹುಲ್ ಹೋದ ಕಡೆಯಲೆಲ್ಲಾ ಬಿಜೆಪಿ, ಜೆಡಿಎಸ್ ಪಕ್ಷದ ಶಕ್ತಿ ಮಾಯವಾಗುತ್ತಿದೆ ಅನ್ನೋದು ಕಾಂಗ್ರೆಸ್ ಮಾತಾದರೆ, ಜೋಡೋ ಯಾತ್ರೆಯಿಂದ ಬಿಜೆಪಿಗೆ ಹೆಚ್ಚಿನ ಲಾಭವಾಗಿದೆ ಅನ್ನೋದು ಬಿಜೆಪಿ ನಾಯಕರ ವಾದ.
ಈ ಬೆನ್ನಲ್ಲೇ ಕಾಂಗ್ರೆಸ್ ಮುಂದೆ ಪಾದಯಾತ್ರೆ ಕೈಗೊಂಡು ಹಿಂದೆ ಚುನಾವಣಾ ಸರ್ವೇಯನ್ನೂ ನಡೆಸುತ್ತಿದೆ ಎನ್ನುವ ಬಗ್ಗೆ ಬಿಜೆಪಿ ವಿಶ್ಲೇಷಣೆ ಮಾಡಿದೆ.