ಬೆಲೆಯೇರಿಕೆಯ ಭಾರ ತಗ್ಗಿಸಲು ಭಾರತ್‌ ಅಕ್ಕಿ!

geetha

ಮಂಗಳವಾರ, 6 ಫೆಬ್ರವರಿ 2024 (18:30 IST)
ನವದೆಹಲಿ -ಭಾರತ್‌ ಆಹಾರ ನಿಗಮ  ಎರಡು ಪ್ರಮುಖ ರಾಷ್ಟ್ರೀಯ ಸಹಕಾರಿ ಸಂಸ್ಥೆಗಳ ಮೂಲಕ 5 ಲಕ್ಷ ಟನ್‌  ಅಕ್ಕಿ ಒದಗಿಸುತ್ತಿದೆ. NAFED ಮತ್ತು NCCF‍ ಸಂಸ್ಥೆಗಳು ಮೊದಲ ಹಂತದಲ್ಲಿ ಕೇಂದ್ರೀಯ ಭಂಡಾರದಲ್ಲಿ ಅಕ್ಕಿ ಮಾರಾಟ ಮಾಡಲಿದೆ. ಎಲ್ಲಾ ರಾಜ್ಯಗಳಲ್ಲಿ ತೆರೆದ ವಾಹನಗಳ ಮೂಲಕ ಪ್ರತಿಯೊಂದ ಪ್ರದೇಶಗಳಲ್ಲಿ ಅಕ್ಕಿಯ ಮಾರಾಟ ನಡೆಯಲಿದೆ ಜೊತೆಗೆ ಅಲ್ಲಲ್ಲಿ ಮಳಿಗೆಗಳನ್ನೂ  ಸಹ ನಿರ್ಮಿಸಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಭಾರತ್‌ ಅಕ್ಕಿ ಇ-ಕಾಮರ್ಸ್‌ ವೇದಿಕೆಯ ಮೂಲಕ ಆನ್ಲೈನ್‌ ನಲ್ಲಿಯೂ ಲಭ್ಯವಾಗಲಿದೆ. 

ಕೇಂದ್ರ ಸರ್ಕಾರದ ಸಹಾಯಧನದ ಅಡಿಯಲ್ಲಿ ಪರಿಚಯಿಸಲಾಗುತ್ತಿರುವ ಭಾರತ್‌ ಅಕ್ಕಿ ಇಂದಿನಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಕಳೆದ ಒಂದು ವರ್ಷದಿಂದ ಧವಸಧಾನ್ಯಗಳ ಬೆಲೆಯಲ್ಲಿ ಶೇ 15 ರಷ್ಟು ಏರಿಕೆಯಾಗಿದ್ದು, ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲೇ ಗ್ರಾಹಕರಿಗೆ ಕೇಂದ್ರ ಸರ್ಕಾರ ತುಸು ನಿರಾಳ ಒದಗಿಸಲು ಚಿಂತಿಸಿದೆ. ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಮಂಗಳವಾರ ಅಕ್ಕಿ ಮಾರಾಟಕ್ಕೆ ದೆಹಲಿಯಲ್ಲಿ ಚಾಲನೆ ನೀಡಲಿದ್ದು, 5 ಕೆಜಿ ಹಾಗೂ 10 ಕೆಜಿ ಪ್ಯಾಕಟ್‌ಗಳಲ್ಲಿ ಭಾರತ್‌ ಅಕ್ಕಿ ದೊರೆಯಲಿದೆ. ಈ ಹಿಂದೆ 27.50 ರೂ. ಗಳಿಗೆ ಭಾರತ್‌ ಗೋದಿ ಹಿಟ್ಟು ಮತ್ತು 60 ರೂ. ದರಕ್ಕೆ ಭಾರತ್‌ ತೊಗರಿ ಬೇಳೆ ನೀಡಲಾಗಿತ್ತು. 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ