ದೀಪಾವಳಿಗೆ ಪಟಾಕಿ ಸಿಡಿಸಿ ಸಂಭ್ರಮಿಸಬೇಕೆಂದುಕೊಂಡವರಿಗೆ ಬಿಗ್ ಶಾಕ್
ಶುಕ್ರವಾರ, 6 ನವೆಂಬರ್ 2020 (10:41 IST)
ಬೆಂಗಳೂರು : ದೀಪಾವಳಿ ಹಬ್ಬ ಇನ್ನೇನು ಹತ್ತಿರ ಬರುತ್ತಿದೆ. ಪಟಾಕಿ ಸಿಡಿಸಿ ಸಂಭ್ರಮ ಆಚರಿಸಬೇಕೆಂದುಕೊಂಡವರಿಗೆ ಬಿಗ್ ಶಾಕ್ ಕಾದಿದೆ.
ಹೌದು. ಪಟಾಕಿಯಿಂದ ವಾತಾವರಣ ಮಲೀನವಾಗುವ ಕಾರಣ ಕೆಲವರು ಶ್ವಾಸಕೋಶದ ಸಮಸ್ಯೆಗೆ ಒಳಗಾಗುತ್ತಾರೆ. ಹಾಗೇ ಈ ನಡುವೆ ಶ್ವಾಸಕೋಶಕ್ಕೆ ಹಾನಿಯನ್ನುಂಟು ಮಾಡುವ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದೆ. ಈ ಸಮಸ್ಯೆಗಳಿಂದ ಜನರನ್ನು ಕಾಪಾಡಲು ಬಿಬಿಎಂಪಿ , ಆರೋಗ್ಯ ಇಲಾಖೆ ಸರ್ಕಾರದ ಬಳಿ ಮನವಿಯೊಂದನ್ನು ಮಾಡಿದೆ.
ಅದೇನೆಂದರೆ ದೀಪಾವಳಿಯಲ್ಲಿ ಪಟಾಕಿ ನಿಷೇಧಿಸುವಂತೆ ಸರ್ಕಾರಕ್ಕೆ ಬಿಬಿಎಂಪಿ , ಆರೋಗ್ಯ ಇಲಾಖೆ ಮನವಿ ಮಾಡಿದೆ. ಕೊರೊನಾ ಹಿನ್ನಲೆಯಲ್ಲಿ ಪಟಾಕಿ ಸಿಡಿಸುವುದು ಸೂಕ್ತವಲ್ಲ. ಸೋಂಕಿತರು, ಕೊರೊನಾದಿಂದ ಗುಣಮುಖರಾದವರು. ಇವರ ಆರೋಗ್ಯ ದೃಷ್ಟಿಯಿಂದ ಪಟಾಕಿ ನಿಷೇಧಕ್ಕೆ ಮನವಿ ಮಾಡಿದೆ ಎನ್ನಲಾಗಿದೆ.