ಎಸಿ ಪತ್ನಿಯ ಆತ್ಮಹತ್ಯೆ ಕೇಸ್ ಗೆ ಬಿಗ್ ಟ್ವಿಸ್ಟ್
ಮಂಗಳವಾರ, 7 ಜನವರಿ 2020 (18:45 IST)
ಶಿಕ್ಷಕಿಯಾಗಿದ್ದ ಎಸಿ ಒಬ್ಬರ ಪತ್ನಿಯ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಎಸಿ ಪ್ರಕಾಶ್ ಅವರ ಪತ್ನಿ ಶಿಕ್ಷಕಿಯಾಗಿದ್ದ ಸುಮಾ ಅವರು ಆತ್ಮಹತ್ಯೆಗೆ ಶರಣಾಗಿದ್ದರು. ಆರಂಭದಲ್ಲಿ ಮಕ್ಕಳಾಗದಿರೋದೇ ಸುಮಾ ಸಾವಿಗೆ ಕಾರಣ ಅಂತ ಭಾವಿಸಲಾಗಿತ್ತು.
ಆದರೆ ಶಾಲೆಯಲ್ಲಿ ಮುಖ್ಯಶಿಕ್ಷಕಿ ಸರಸ್ವತಿ ನೀಡುತ್ತಿದ್ದ ಕಿರುಕುಳದಿಂದಲೇ ಶಿಕ್ಷಕಿ ಸುಮಾ ಆತ್ಮಹತ್ಯೆಯ ದಾರಿ ತುಳಿದಿದ್ದಾರೆ.
ಮುಖ್ಯ ಶಿಕ್ಷಕಿ ಕೊಡುತ್ತಿದ್ದ ಕಿರುಕುಳದ ಕುರಿತು ಸಾವಿಗೂ ಮುನ್ನ ಸಹೋದ್ಯೋಗಿಯೊಂದಿಗೆ ಮಾತನಾಡಿರೋ ಫೋನ್ ಕಾಲ್ ರೆಕಾರ್ಡರ್ ನಿಂದ ಈ ವಿಷ್ಯ ಹೊರಬಿದ್ದಿದೆ.
ಕಳೆದ ವಾರ ಶಿವಮೊಗ್ಗ ನಗರದಲ್ಲಿ ಶಿಕ್ಷಕಿ ಸುಮಾ ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಶಾಲೆಯ ಮುಖ್ಯ ಶಿಕ್ಷಕಿ ವಿರುದ್ಧ ಕೇಸ್ ದಾಖಲಾಗಿದೆ.