ದೇವೇಗೌಡ್ರ ಮನೆದೇವ್ರ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಬ್ರೇಕಿಂಗ್

ಶನಿವಾರ, 13 ಏಪ್ರಿಲ್ 2019 (16:57 IST)
ಹಾಸನದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಲದೇವರ ದೇವಾಲಯ ಹಾಗೂ ಅರ್ಚಕರ ಮೇಲೆ ನಡೆದಿದೆ ಎನ್ನಲಾದ ಐಟಿ ದಾಳಿ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ಹೊಳೆನರಸೀಪುರ ತಾಲೂಕು ಹರದನಹಳ್ಳಿ ದೇವಾಲಯ ಮತ್ತು ಅರ್ಚಕರ ಮನೆ ಮೇಲೆ ಅಧಿಕಾರಿಗಳ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಪೊಲೀಸರಿಗೆ ಅರ್ಚಕ ಪ್ರಕಾಶ್ ಮತ್ತು ರೇವಣ್ಣ ದೂರು ನೀಡಿದ್ದಾರೆ.

ಅಪರಿಚಿತರ ವಿರುದ್ಧ ಹೊಳೆನರಸೀಪುರ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಎಲೆಕ್ಷನ್ ಆಫೀಸರ್ಸ್ ಎಂದು ಮನೆಯಲ್ಲಿ ಶೋಧ ನಡೆಸಿದ್ದ ಇಬ್ಬರು ಅಪರಿಚಿತರು, ಮೊಬೈಲ್ ಸಹ ಕಸಿದುಕೊಂಡಿದ್ದರು. ಅವರ ಪತ್ತೆಗೆ ಪೊಲೀಸರಿಗೆ ದೂರು ನೀಡಿದ್ದಾರೆ ಅರ್ಚಕರಾದ ಪ್ರಕಾಶ್ ಮತ್ತು ರೇವಣ್ಣ.

ಪ್ರಕಾಶ್ ಮತ್ತು ರೇವಣ್ಣ ,ಈಶ್ವರ ದೇಗುಲದ ಅರ್ಚಕರಾಗಿದ್ದಾರೆ. ನಿನ್ನೆ ಹತ್ತು ಗಂಟೆಗೆ ಹರದನಹಳ್ಳಿಯಲ್ಲಿ ಅರ್ಚಕರ ಮನೆಗಳು, ದೇಗುಲದಲ್ಲಿ ಪರಿಶೀಲನೆ ನಡೆಸಿದ್ದ ಇಬ್ಬರು ಅಪರಿಚಿತರಲ್ಲಿ ಓರ್ವ ಹಿಂದಿ ಮತ್ತು ಮತ್ತೋರ್ವ ಕನ್ನಡದಲ್ಲಿ ಮಾತಾಡಿದ್ದಾರೆ.

ಆ ಇಬ್ಬರು ಅಪರಿಚಿತರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಹರದನಹಳ್ಳಿ, ಮಾಜಿ ಪ್ರಧಾನಿ
ಹೆಚ್ಡಿ ದೇವೇಗೌಡರ ಹುಟ್ಟೂರಾಗಿದೆ. ಅಲ್ಲಿರುವ ಈಶ್ವರ, ದೇವೇಗೌಡರ ಮನೆ ದೇವರಾಗಿದ್ದಾರೆ. ಅಪರಿಚಿತ ಇಬ್ಬರು ಮನೆ , ಶೋಧಿಸಿದ್ದನ್ನು ಕಂಡು ಐಟಿ ಅಧಿಕಾರಿಗಳೆಂದು ಕಲ್ಪಿಸಲಾಗಿತ್ತು. ಆ ಇಬ್ಬರು ಯಾವ ಇಲಾಖೆಯವರು, ಅವರ ವಿಳಾಸ ಏನೆಂಬುದು ಇನ್ನೂ ಗೊತ್ತಾಗಿಲ್ಲ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ