ಮಾಂಸಾಹಾರ ಸೇವಿಸಿ ಶಬರಿಮಲೆ ಪ್ರವೇಶಿಸಿದ ಬಿಂದು ಹಾಗೂ ಕನಕದುರ್ಗಾ!
ಶುಕ್ರವಾರ, 4 ಜನವರಿ 2019 (07:47 IST)
ಮಡಿಕೇರಿ: ನಿರ್ಬಂಧದ ನಡುವೆಯೂ ಬುಧವಾರ ಬೆಳಿಗ್ಗೆ ಪ್ರವೇಶಿಸಿದ್ದ ಇಬ್ಬರು ಮಹಿಳೆಯರಾದ ಬಿಂದು ಮತ್ತು ಕನಕದುರ್ಗಾ ದೇವಸ್ಥಾನ ಪ್ರವೇಶಕ್ಕೂ ಮೊದಲು ಕೊಡಗಿನ ವಿರಾಜಪೇಟೆಯ ದೊಡ್ಡೆಟ್ಟಿ ಚೌಕದ ಲಾಡ್ಜ್ನಲ್ಲಿ ತಂಗಿದ್ದರು ಎಂಬ ವಿಷಯ ಬಹಿರಂಗವಾಗಿದೆ.
ಇನ್ನು ಕೇರಳದ ಪೊಲೀಸರೇ ಮಫ್ತಿಯಲ್ಲಿ ಬಂದು ಬಿಂದು ಹೆಸರಿನಲ್ಲಿ ರೂಮ್ ಬುಕ್ ಮಾಡಿದ್ದಾರೆ ಎನ್ನಲಾಗಿದೆ. ಡಿ.31ರಂದು ರೂಮ್ ಖಾಲಿ ಮಾಡಿದ್ದಾರೆಯಂತೆ.
ಲಾಡ್ಜ್ ನಿಂದ ಹೊರಡುವಾಗ ಇಬ್ಬರೂ ಮಹಿಳೆಯರು ಕಪ್ಪು ಬಟ್ಟೆ ಧರಿಸಿ ವಿರಾಜಪೇಟೆಯಿಂದ ತೆರಳಿದ್ದಾರೆ. ಅಲ್ಲದೆ ಲಾಡ್ಜ್ನಲ್ಲಿದ್ದ ಸಂದರ್ಭ ಯಾವುದೇ ರೀತಿಯ ವೃತ ಪಾಲಿಸದೆ ಮಾಂಸಾಹಾರ ಸೇವಿಸಿದ್ದರು ಎಂದು ಲಾಡ್ಜ್ ಸಿಬ್ಬಂದಿ ಮಾಲೀಕರಿಗೆ ತಿಳಿಸಿದ್ದಾರೆ.
ಹಾಗಾಗಿ ದೇವಾಲಯ ಪ್ರವೇಶ ಮಾಡಬೇಕಾದರೆ ಪಾಲಿಸಬೇಕಾದ ವ್ರತ, ನಿಯಮಗಳನ್ನು ಪಾಲಿಸದೇ ಇಬ್ಬರು ಮಹಿಳೆಯರು ದೇವಸ್ಥಾನದ ಪಾವಿತ್ರ್ಯಕ್ಕೆ ಧಕ್ಕೆ ತಂದಿದ್ದಾರೆ ಎಂದು ಹಾಗೇ ಅವರಿಗೆ ಕೇರಳ ಸರ್ಕಾರ ಹಾಗೂ ಪೊಲೀಸರು ಬೆಂಬಲ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿದೆ. ಇದು ಕೇರಳದಲ್ಲಿ ಹಿಂಸಾಚಾರ ರೂಪ ಪಡೆದುಕೊಂಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.