ಮಧುಕರ ಶೆಟ್ಟಿ ಬಗ್ಗೆ ಶಂಕರ್ ಬಿದರಿ ಹೇಳಿದ್ದು ಕೇಳಿದ್ರೆ ಶಾಕ್ ಆಗ್ತೀರಾ?
ಶನಿವಾರ, 29 ಡಿಸೆಂಬರ್ 2018 (20:33 IST)
ಅಗಲಿದ ಪೊಲೀಸ್ ಅಧಿಕಾರಿ ಮಧುಕರ ಶೆಟ್ಟಿ ಬಗ್ಗೆ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಅವರು ತಮ್ಮ ಒಡನಾಟ ಹಾಗೂ ಅವರ ಕರ್ತವ್ಯ ನಿಷ್ಠೆ ಬಗ್ಗೆ ಹೇಳಿದ್ದಾರೆ.
ಮಧುಕರ್‌ಶೆಟ್ಟಿ ತಮ್ಮ 47ನೇ ವಯಸ್ಸಿನಲ್ಲಿ ನಿಧನರಾಗಿದ್ದು ಇಡೀ ಇಲಾಖೆಗೆ ನೋವನ್ನು ತಂದೊಡ್ಡಿದೆ. 2000 ಇಸವಿಯಿಂದ ಅವರನ್ನು ನಾನು ಬಲ್ಲೆ. ಚಾಮರಾಜನಗರ ಎಸ್ ಪಿ ಯಾಗಿ ಅತ್ಯುತ್ತಮವಾಗಿ ಕೆಲಸ ಮಾಡಿದಂತವರು.
ಲೋಕಾಯುಕ್ತದಲ್ಲಿ ಅವರ ಕಾರ್ಯ ಶ್ಲಾಘನೀಯವಾದದ್ದು ಎಂದು ಸ್ಮರಿಸಿದರು.
ಮಧುಕರ ಶೆಟ್ಟಿ ಅವರು ಮಾಡಿದ ಕೆಲಸದ ಕುರಿತು ಯಾರೊಂದಿಗೆ ಹೇಳಿಕೊಳ್ಳದ ವ್ಯಕ್ತಿ. ನಾನು ನನ್ನ ಇಡೀ ಜೀವಮಾನದಲ್ಲಿ ಸಾವಿರಾರು ಅಧಿಕಾರಿಗಳನ್ನು ನೋಡಿದ್ದೇನೆ. ಅದರಲ್ಲಿ ಪ್ರಾಮಾಣಿಕರಲ್ಲಿ ಮಧುಕರ್‌ಶೆಟ್ಟಿ ನಂಬರ್ ಒನ್ ವ್ಯಕ್ತಿ ಎಂದರು.
ಅವರ 20 ವರ್ಷಗಳ ಸೇವೆ ಮುಂಬರುವ ಅಧಿಕಾರಿಗಳಿಗೆ ಮಾದರಿಯಾಗಿದೆ. ವೀರಪ್ಪನ ಹಿಡಿಯಲು ಹೋದ ಟೀಂನಲ್ಲಿಅವರು ಇದ್ದರು. ವೀರಪ್ಪನ್ ಕಾರ್ಯಾಚರಣೆ ಬಳಿಕ ಸರ್ಕಾರ ಲಕ್ಷ ಲಕ್ಷ ಹಣ ಬಹುಮಾನವಾಗಿ ಕೊಟ್ಟಿತ್ತು.
ಆಗ ಮಧುಕರ್ ಶೆಟ್ಟಿ ಕಾರ್ಯಾಚರಣೆಯಲ್ಲಿ ನಮ್ಮ ಪಾತ್ರವಿಲ್ಲ ಅಂತ ಹಣ ಹಾಗೂ ಸೈಟ್ ವಾಪಸ್ಸು ನೀಡಿದ್ದರು ಎಂದು ಅವರ ಪ್ರಾಮಾಣಿಕತೆಯನ್ನು ಬಿಚ್ಚಿಟ್ಟರು.