ಸಂಪುಟದಿಂದ ರಮಾನಾಥ ರೈ ವಜಾಕ್ಕೆ ಬಿಜೆಪಿ ಆಗ್ರಹ

ಶನಿವಾರ, 2 ಸೆಪ್ಟಂಬರ್ 2017 (14:53 IST)
ಮಂಗಳೂರು: ರಮಾನಾಥ ರೈ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ದಕ್ಷಿಣ ಕನ್ನಡದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಸಚಿವ ರಮಾನಾಥ ರೈ ಕೋಮು ಸೌಹಾರ್ದತೆ ಕೆಡಿಸಿ, ಹಿಂದೂ ಕಾರ್ಯಕರ್ತರ ಕೊಲೆಗೆ ಪ್ರೇರೇಪಣೆ ನೀಡುತ್ತಿದ್ದಾರೆ. ಹೀಗಾಗಿ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜಾ ಆಗ್ರಹಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹರೀಶ್ ಪೂಂಜಾ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಮೇಲೆ ಹಿಂದೂ ಕಾರ್ಯಕರ್ತರ ಕೊಲೆ ಸಂಬಂಧಿಸಿದಂತೆ ಸಚಿವ ರೈ ಪಾತ್ರದ ಬಗ್ಗೆ ತನಿಖೆ ನಡೆಸಿ, ಆರೋಪ ಸಾಬೀತಾದರೆ
ನ್ಯಾಯಾಲಯ ಖಂಡಿತ ಶಿಕ್ಷೆ‌ ವಿಧಿಸುತ್ತದೆ. ಸೆ. 12ರಂದು ಸಚಿವ ರಮಾನಾಥ ರೈ ನೇತೃತ್ವದಲ್ಲಿ ನಡೆಯುವ ಸೌಹಾರ್ದ ನಡಿಗೆ, ಡೋಂಗಿ ಜಾತ್ಯಾತೀತತೆಯ ನಡಿಗೆ ಎಂದು ವ್ಯಂಗ್ಯವಾಡಿದ್ದಾರೆ.

ಸಮಾಜಘಾತುಕ ಸಂಘಟನೆಗಳಿಗೆ, ಕೋಮು ಹಿಂಸೆಗೆ ರೈ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಸಚಿವ ರಮಾನಾಥ ರೈರನ್ನು ಸಂಪುಟದಿಂದ‌ ವಜಾಗೊಳಿಸಬೇಕು. ಅಲ್ಲದೆ ಹಿಂದೂಗಳ ಹತ್ಯೆ, ಹಲ್ಲೆ‌ ಪ್ರಕರಣಗಳನ್ನು ಸಿಬಿಐಗೆ ಹಸ್ತಾಂತರಿಸಬೇಕು ಎಂದು ಒತ್ತಾಯಿಸಿದರು.

ಸೆ.4ರಂದು ದಕ್ಷಿಣ ‌ಕನ್ನಡ ‌ಜಿಲ್ಲೆಯ ಪ್ರತೀ ಗ್ರಾ.ಪಂ. ವ್ಯಾಪ್ತಿಯಲ್ಲೂ ಪ್ರತಿಭಟನೆ ನಡೆಸಿ, ಬಳಿಕ ಸ್ಥಳೀಯ ಅಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು. ಸೆ.7ರಂದು ರಾಜ್ಯದ 5 ವಿಭಾಗಗಳಿಂದ ಮಂಗಳೂರು ಚಲೋ ಬೈಕ್ ರ್ಯಾಲಿ ನಡೆಸಲಾಗುವುದು. ಬಿಜೆಪಿ, ಸಂಘ ಪರಿವಾರ ಕಾರ್ಯಕರ್ತರ ಹತ್ಯೆಯಲ್ಲಿ ಪಿಎಫ್ಐ, ಎಸ್ ಡಿಪಿಐ, ಕೆಎಫ್ ಡಿ‌ ಕೈವಾಡವಿದೆ. ಹೀಗಾಗಿ ಈ ಸಂಫಟನೆ, ಪಕ್ಷವನ್ನು ನಿಷೇಧಿಸಲು ಆಗ್ರಹಿಸಿ ಪ್ರತಿಭಟನೆ ಹಾಗೂ ಮಂಗಳೂರು ಚಲೋ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ