ನ್ಯೂಯಾರ್ಕ್: ಭಾರತಕ್ಕೆ ರಷ್ಯಾ ಜೊತೆ ವ್ಯಾಪಾರ ಮಾಡಬಾರದು ಎಂದು ಬೆದರಿಕೆ ಹಾಕ್ತೀರಿ. ಆದರೆ ನೀವು ರಷ್ಯಾದಿಂದ ಯುರೇನಿಯಂ, ಕೆಮಿಕಲ್ ಫರ್ಟಿಲೈಸರ್ ಖರೀದಿಸುತ್ತಿದ್ದೀರಂತೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಪ್ರಶ್ನೆ ಮಾಡಿದ್ದಕ್ಕೆ ಅವರ ಉತ್ತರವೇನಿತ್ತು ವಿಡಿಯೋ ನೋಡಿ.
ರಷ್ಯಾದಿಂದ ಭಾರತ ಕಡಿಮೆ ಬೆಲೆ ತೈಲ ಖರೀದಿ ಮಾಡಿ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. ರಷ್ಯಾದಿಂದ ತೈಲ ಖರೀದಿಸುವ ಮೂಲಕ ಆ ದೇಶಕ್ಕೆ ಉಕ್ರೇನ್ ವಿರುದ್ಧ ಯುದ್ಧಕ್ಕೆ ಹಣ ಸಹಾಯ ಮಾಡಿದಂತೆ ಎಂದೆಲ್ಲಾ ಬಡಬಡಾಯಿಸುತ್ತಿರುವ ಡೊನಾಲ್ಡ್ ಟ್ರಂಪ್ ನಿನ್ನೆ ಮಾಧ್ಯಮಗಳ ಮುಂದೆ ಬೆತ್ತಲಾಗಿದ್ದಾರೆ.
ರಷ್ಯಾದಿಂದ ತೈಲ ಖರೀದಿ ನಿಲ್ಲಿಸದೇ ಇದ್ದರೆ ಭಾರತದ ವಿರುದ್ಧ 24 ಗಂಟೆಗಳಲ್ಲಿ ಸುಂಕ ಹೆಚ್ಚಿಸುವುದಾಗಿ ಬೆದರಿಕೆ ಹಾಕಿರುವ ಡೊನಾಲ್ಡ್ ಟ್ರಂಪ್ ಗೆ ಪತ್ರಿಕಾಗೋಷ್ಠಿಯಲ್ಲೇ ಮಖಭಂಗವಾಗಿದೆ.
ಪತ್ರಕರ್ತರೊಬ್ಬರು, ನೀವೂ ರಷ್ಯಾದಿಂದ ಯುರೇನಿಯಂ, ಕೆಮಿಕಲ್ ಫರ್ಟಿಲೈಸರ್ ಆಮದು ಮಾಡಿಕೊಳ್ಳುತ್ತಿದ್ದೀರಿ ಎಂದು ಭಾರತ ಆರೋಪಿಸುತ್ತಿದೆಯಲ್ಲಾ? ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದ್ದಾರೆ. ಇದಕ್ಕೆ ಪೆಚ್ಚಾದ ಟ್ರಂಪ್ ನನಗೆ ಗೊತ್ತಿಲ್ಲ. ಇದರ ಬಗ್ಗೆ ತಿಳಿದುಕೊಂಡು ಮಾತನಾಡುತ್ತೇನೆ. ಮುಂದಿನ ಪ್ರಶ್ನೆ ಪ್ಲೀಸ್.. ಎಂದು ಹಾರಿಕೆಯ ಉತ್ತರ ನೀಡಿದ್ದಾರೆ.
ಭಾರತದ ಮೇಲೆ ಈ ರೀತಿ ಸುಂಕದ ಬೆದರಿಕೆ ಒಡ್ಡುತ್ತಿರುವುದಕ್ಕೆ ಅಮೆರಿಕಾದಲ್ಲಿ ಸ್ವಪಕ್ಷೀಯರಿಂದಲೇ ಟ್ರಂಪ್ ಟೀಕೆಗೊಳಗಾಗಿದ್ದಾರೆ. ಭಾರತ ಒಂದು ಸಾರ್ವಭೌಮ ರಾಷ್ಟ್ರ. ಅದರ ನಿರ್ಧಾರಗಳ ಮೇಲೆ ಪ್ರಭಾವ ಬೀರಲು, ಒತ್ತಡ ಹಾಕಲು ಹೋಗುವುದು ಸಾರ್ವಭೌಮತ್ವದ ಉಲ್ಲಂಘನೆ ಮಾಡಿದಂತೆ ಎಂದು ಅಮೆರಿಕಾದಲ್ಲಿ ಟ್ರಂಪ್ ವಿರುದ್ಧವೇ ಟೀಕೆ ಕೇಳಿಬಂದಿದೆ.
#WATCH | Responding to ANI's question on US imports of Russian Uranium, chemical fertilisers while criticising their (Indian) energy imports', US President Donald Trump says, "I don't know anything about it. I have to check..."