ನಟಿ ರಮ್ಯಾಗೆ ಬಿಜೆಪಿ ಕಾರ್ಯಕರ್ತರು ಕಳುಹಿಸಿಕೊಟ್ಟ ಸ್ಪೆಷಲ್ ಗಿಫ್ಟ್!

ಗುರುವಾರ, 24 ಆಗಸ್ಟ್ 2017 (09:23 IST)
ಬೆಂಗಳೂರು: ನಟಿ, ಮಾಜಿ ಸಂಸದೆ ರಮ್ಯಾ ಇತ್ತೀಚೆಗೆ ಪ್ರಧಾನಿ ಮೋದಿ ವಿರುದ್ಧ ಟ್ವಿಟರ್ ಪೇಜ್ ನಲ್ಲಿ ಟೀಕೆ ಮಾಡಿದ್ದರು. ಅದಕ್ಕೆ ಬಿಜೆಪಿ ಕಾರ್ಯಕರ್ತರು ಸ್ಪೆಷಲ್ ಗಿಫ್ಟ್ ಪಾರ್ಸಲ್ ಮಾಡಿದ್ದಾರೆ.

 
ಅಸ್ಸಾಂ, ಗುಜರಾತ್ ಮುಂತಾದ ಪ್ರವಾಹ ಪೀಡಿತ ಸ್ಥಳದಲ್ಲಿ ಸಂತ್ರಸ್ತರಿಗೆ ಪ್ರಧಾನಿ ಮೋದಿ ಸಾಂತ್ವನ ಹೇಳುತ್ತಿರುವ ಫೋಟೋ ಕಳುಹಿಸಿಕೊಟ್ಟರೆ  25 ಸಾವಿರ ರೂ. ಬಹುಮಾನ ನೀಡುವುದಾಗಿ ರಮ್ಯಾ ಆಹ್ವಾನ ಕೊಟ್ಟಿದ್ದರು.

ಇದರ ವಿರುದ್ಧ ಕೆರಳಿದ ಬಿಜೆಪಿ ಕಾರ್ಯಕರ್ತರು, ಮಂಡ್ಯದ ಅಂಚೆ ಕಚೇರಿ ಎದುರು ಪ್ರತಿಭಟನೆ ಮಾಡಿದ್ದಲ್ಲದೆ, ಬಾಗಿನವನ್ನು ಪಾರ್ಸೆಲ್ ಮಾಡಿ ಕಳುಹಿಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಮಕ್ಕಳ ಆಟಿಕೆ ಪ್ರದರ್ಶಿಸಿ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ.. ಟೀಂ ಇಂಡಿಯಾ ಇನ್ನು ಲಂಕಾದಲ್ಲಿ ರಾಷ್ಟ್ರಗೀತೆ ಹಾಡಲ್ಲ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ