ಬಿಜೆಪಿಯವರು ಶಾಪಿಂಗ್ ಮಾಲ್ ಮಾಡಿದ್ದಾರೆ : ಪ್ರಿಯಾಂಕ್ ಖರ್ಗೆ
ಬಿಜೆಪಿಯವರು ವಿಧಾನಸೌಧವನ್ನು ಜಗತ್ತಿನ ದೊಡ್ಡ ಶಾಪಿಂಗ್ ಮಾಲ್ ಮಾಡಿದ್ದಾರೆ. ಈ ಶಾಪಿಂಗ್ ಮಾಲ್ನಲ್ಲಿ ವರ್ಗಾವಣೆ, ಪೋಸ್ಟಿಂಗ್, ಕಾಮಗಾರಿ, ಉದ್ಯೋಗ ಖರೀದಿ ಮಾಡಬಹುದು ಎಂದು ಬಿಜೆಪಿ ಸರ್ಕಾರದ ವಿರುದ್ಧ ಶಾಸಕ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಕಲಬುರಗಿ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಬಿಜೆಪಿ ಸರ್ಕಾರ ಬಂದ ಮೇಲೆ ಭ್ರಷ್ಟಾಚಾರ ರಾಜ್ಯ ಅನ್ನೋ ಬಿರುದು ಸಿಕ್ಕಿದೆ. ಬಿಜೆಪಿ ಅಂದ್ರೆ ಬ್ರೋಕರ್ ಜನತಾ ಪಕ್ಷ. ಬಿಜೆಪಿಯವರು ವಿಧಾನಸೌಧವನ್ನು ಜಗತ್ತಿನ ದೊಡ್ಡ ಶಾಪಿಂಗ್ ಮಾಲ್ ಮಾಡಿದ್ದಾರೆ.