ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ಉದ್ಯೋಗ ಮೇಳ: ಯುವಕರಿಗೆ ಪ್ರಯೋಜನವಾಗಲಿ ಎಂದ ವಿಜಯೇಂದ್ರ

Krishnaveni K

ಬುಧವಾರ, 17 ಸೆಪ್ಟಂಬರ್ 2025 (13:25 IST)
ಕಲಬುರಗಿ: ಯುವ ಸಮೂಹ ಉದ್ಯೋಗ ಮೇಳಗಳ ಸದುಪಯೋಗ ಪಡೆದುಕೊಳ್ಳಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.
 
ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ  ಜೀ ಅವರ ಜನ್ಮದಿನದ ಅಂಗವಾಗಿ ಕಲಬುರ್ಗಿಯಲ್ಲಿ ಇಂದು ಪಕ್ಷದ ನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್ ಅವರ ನೇತೃತ್ವದಲ್ಲಿ ಆಯೋಜಿಸಿದ್ದ 75@ಉದ್ಯೋಗ ಮಹೋತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
 
ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜೀ ಅವರು ದೇಶದಲ್ಲಿ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಮಹತ್ವದ ಗುರಿ ತಲುಪಿ ಮುನ್ನಡೆಯುತ್ತಿದ್ದಾರೆ. ಯುವಕರು ಉದ್ಯೋಗದಾತರಾಗಬೇಕೆಂದು ಹಲವು ಯೋಜನೆಗಳು ಹಾಗೂ ವಿಪುಲ ಅವಕಾಶಗಳನ್ನು ಕಲ್ಪಿಸಿದ್ದಾರೆ, ನಮ್ಮ ಯುವ ಸಮುದಾಯ ಸದುಪಯೋಗ ಪಡಿಸಿಕೊಂಡು ರಾಷ್ಟ್ರಕ್ಕೆ ಕೊಡುಗೆ ನೀಡಬೇಕೆಂಬ ಕರೆ ನೀಡಿದರು.

ಕಲ್ಯಾಣ ಕರ್ನಾಟಕ ಭಾಗದ ನಿರುದ್ಯೋಗಿ ಯುವ ಸಮೂಹಕ್ಕೆ ಉದ್ಯೋಗ ನೀಡುವ ಮಹತ್ವದ ಉದ್ದೇಶದಿಂದ ಆಯೋಜಿಸಿರುವ ಇಂದಿನ ಉದ್ಯೋಗ ಮೇಳ ಹೆಚ್ಚಿನ ಉದ್ಯೋಗ ಅವಕಾಶ ಒದಗಿಸುವ ನಿಟ್ಟಿನಲ್ಲಿ ಯಶಸ್ವಿಯಾಗಲೆಂದು ಶುಭ ಹಾರೈಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ