ಮೇಟಿ ರಾಸಲೀಲೆಯಲ್ಲಿ ಬಿಜೆಪಿಯ ಕರಿನೆರಳು?

ಗುರುವಾರ, 15 ಡಿಸೆಂಬರ್ 2016 (18:00 IST)
ಮಾಜಿ ಸಚಿವ ಎಚ್.ವೈ,ಮೇಟಿ ರಾಸಲೀಲೆ ಸಿಡಿ ಬಿಡುಗಡೆ ತಡೆಯಲು ಮಾಜಿ ಸಚಿವ ಮುರುಗೇಶ್ ನಿರಾಣಿ ಯತ್ನಿಸಿದ್ದರು. ಈ ವಿಚಾರದಲ್ಲಿ ನಿರಾಣಿ ಹಾಗೂ ಬಿಜೆಪಿಯ ಮಾಜಿ ಶಾಸಕ ವೀರಣ್ಣ ಚರಂತಿಮಠ ನಡುವೆ ವಾಗ್ವಾದ ನಡೆದಿತ್ತು ಎಂದು ಹೇಳಲಾಗುತ್ತಿದೆ.
ಸಚಿವರ ರಾಸಲೀಲೆ ಸಿಡಿ ಬಿಡುಗಡೆ ಮಾಡದಂತೆ ಗನ್‌ಮ್ಯಾನ್ ಸುಭಾಷ್ ಮನವೊಲಿಸಿ, ಸಚಿವ ಮೇಟಿ ಜೊತೆ ಡೀಲ್ ಮಾಡಲು ಮಾಜಿ ಸಚಿವ ಮುರುಗೇಶ್ ನಿರಾಣಿ ಪ್ರಯತ್ನಿಸಿದ್ದರು ಎನ್ನಲಾಗಿದೆ.
 
ಪ್ರಕರಣದಲ್ಲಿ ಮಾಜಿ ಸಚಿವ ಮುರುಗೇಶ್ ನಿರಾಣಿ ಮಧ್ಯಪ್ರವೇಶಕ್ಕೆ ಬಾಗಲಕೋಟೆಯ ಮಾಜಿ ಶಾಸಕ ವೀರಣ್ಣ ಚರಂತಿಮಠ್ ಆಕ್ಷೇಪ ವ್ಯಕ್ತಪಡಿಸಿದ್ದರು. 
 
ಬೀಳಗಿ ಕ್ಷೇತ್ರದಲ್ಲಿ ಮೇಟಿ ಸಮುದಾಯದ ಮತಗಳು ಅಧಿಕ ಇರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಚ್.ವೈ.ಮೇಟಿಗೆ ನೆರವಾದರೆ, ಚುನಾವಣೆ ಸಮಯದಲ್ಲಿ ಅದು ತನಗೆ ಸಹಾಯವಾಗುತ್ತದೆ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಸಮರ್ಥಸಿಕೊಂಡಿದ್ದರು ಎನ್ನಲಾಗಿದೆ. 
 
ಎಚ್.ವೈ.ಮೇಟಿ ರಾಸಲೀಲೆ ವಿಡಿಯೋ ಸಿಡಿಯನ್ನು ನಿನ್ನೆ ದೆಹಲಿಯಲ್ಲಿ ಆರ್‌ಟಿಐ ಕಾರ್ಯಕರ್ತ ರಾಜಶೇಖರ್ ಮುಲಾಲಿ ಅವರು ಬಿಡುಗಡೆಗೊಳಿಸಿದ್ದರು. ಸಚಿವರ ರಾಸಲೀಲೆ ಸಿಡಿ ಬಿಡುಗಡೆಯಾಗುತಿದ್ದಂತೆ ನೈತಿಕ ಹೊಣೆ ಹೊತ್ತು ಅಬಕಾರಿ ಸಚಿವ ಎಚ್.ವೈ.ಮೇಟಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ