ಕಾಂಗ್ರೆಸ್​​​​​​​​ ವಿರುದ್ಧ ಬಿಜೆಪಿ ಲೇವಡಿ

ಮಂಗಳವಾರ, 23 ಮೇ 2023 (21:00 IST)
5 ವರ್ಷ ಸಿಎಂ ಸಿದ್ದರಾಮಯ್ಯ ಸಿಎಂ ಆಗಿರ್ತಾರೆ ಎಂಬ ಸಚಿವ ಎಂ.ಬಿ.ಪಾಟೀಲ್ ಹೇಳಿಕೆಗೆ ಬಿಜೆಪಿ ಲೇವಡಿ ಮಾಡಿದೆ. ಟ್ವೀಟ್​​ ಮೂಲಕ ಕಾಂಗ್ರೆಸ್​​​​​​​​ ವಿರುದ್ಧ ಬಿಜೆಪಿ ವ್ಯಂಗ್ಯವಾಡಿದೆ.. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಸಿಎಂ ಆಗುವುದಿಲ್ಲ.. ಡಿಕೆಶಿ ಸಿಎಂ ಆಗಲು ಸಿದ್ದರಾಮಯ್ಯ ಅವರು ಬಿಡಲ್ಲ ಎಂದು ಎಂ.ಬಿ.ಪಾಟೀಲ್​ ಮೂಲಕ ಡಿಕೆಶಿಗೆ ಎಚ್ಚರಿಕೆ ನೀಡಿದ್ದಾರೆ.. ಈ ಮೂಲಕ ನೇರವಾದ ಎಚ್ಚರಿಕೆಯನ್ನು ರವಾನಿಸಿದ್ದಾರೆ.. ಈ ಸರ್ಕಾರ ಸುಸ್ಥಿರವಾಗಿರಲಿದೆ ಎಂಬ ಲಕ್ಷಣ ಕಾಣುತ್ತಿಲ್ಲ ಎಂದು ಬಿಜೆಪಿ ಲೇವಡಿ ಮಾಡಿದೆ. ದೆಹಲಿಯ ತಮ್ಮ ಹೈಕಮಾಂಡಿಗೆ ಕಪ್ಪ ಪೂರೈಸಬೇಕಾದ ಏಕೈಕ ಮಾನದಂಡದಲ್ಲಿ ಈ ATM ಸರ್ಕಾರ ರಚನೆಯಾಗಿರುವುದು.. ಅದಷ್ಟೇ ಇದರ ಆದ್ಯತೆಯಾಗಿರುವುದು ರಾಜ್ಯದ ದುರಂತ ಎಂದು ಟ್ವೀಟ್​ನಲ್ಲಿ ಬಿಜೆಪಿ ಟೀಕಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ