ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆ ಇಫೆಕ್ಟ್: ಬಿಜೆಪಿ ಭಿನ್ನರ ಸಭೆ ಇಂದು

Krishnaveni K

ಶುಕ್ರವಾರ, 28 ಮಾರ್ಚ್ 2025 (11:07 IST)
ಬೆಂಗಳೂರು: ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆ ಬಳಿಕ ಇಂದು ಅವರ ಬೆಂಬಲಿಗ ನಾಯಕರು ಸಭೆ ಸೇರಲಿದ್ದಾರೆ. ಮುಂದಿನ ನಡೆಯೇನು ಎಂದು ಇಂದು ತೀರ್ಮಾನವಾಗಲಿದೆ.

ಬಿವೈ ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನದಿಂದ ಹೊರನಡೆಯಬೇಕು ಎಂದು ಯತ್ನಾಳ್ ಜೊತೆಗೆ ಹೋರಾಟ ಮಾಡುತ್ತಿದ್ದವರಲ್ಲಿ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ ಕೂಡಾ ಪ್ರಮುಖರು. ಇವರಿಗೆ ಪ್ರತಾಪ್ ಸಿಂಹ ಮುಂತಾದ ನಾಯಕರ ಬೆಂಬಲವಿತ್ತು.

ಇದೀಗ ಯತ್ನಾಳ್ ಬಣದಲ್ಲಿ ಗುರುತಿಸಿಕೊಂಡಿದ್ದ ನಾಯಕರು ಇಂದು ಸಭೆ ನಡೆಸಲಿದ್ದಾರೆ. ಯತ್ನಾಳ್ ಉಚ್ಛಾಟನೆ ನಿರ್ಧಾರ ವಾಪಸ್ ಪಡೆಯಲು ಹೈಕಮಾಂಡ್ ಗೆ ಒತ್ತಡ ಹೇರುವ ಬಗ್ಗೆ ಇಂದು ಚರ್ಚೆನ ನಡೆಸಲಿದ್ದಾರೆ.

ಇದಲ್ಲದೇ ಹೋದಲ್ಲಿ ಬೇರೆ ದಾರಿ ನೋಡಿಕೊಳ್ಳುವ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಯಿದೆ. ಸದ್ಯಕ್ಕೆ ಹೊಸ ಪಕ್ಷ ಸ್ಥಾಪನೆ ಮಾಡುವುದು ಅಷ್ಟು ಸುಲಭವಲ್ಲ. ಹೀಗಾಗಿ ಬಿಜೆಪಿ ಭಿನ್ನರ ಮುಂದಿನ ನಡೆಯೇನು ಎಂಬ ಬಗ್ಗೆ ಎಲ್ಲರ ಕುತೂಹಲವಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ