Basanagouda Patil Yatnal: ಪಕ್ಷದಿಂದ ಉಚ್ಛಾಟನೆಯಾದ ಬಳಿಕ ಬಸನಗೌಡ ಪಾಟೀಲ್ ಯತ್ನಾಳ್ ಎಲ್ಲಿದ್ದಾರೆ ಗೊತ್ತಾ
ಪಕ್ಷ ತಮ್ಮನ್ನು ಉಚ್ಛಾಟಿಸಿದ ನಿರ್ಧಾರ ಪ್ರಕಟಿಸಿದ ಬಳಿಕ ಯತ್ನಾಳ್ ಬಹಿರಂಗವಾಗಿ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಯಾವುದೇ ಮಾಧ್ಯಮಗಳ ಮುಂದೆಯೂ ಬರಲಿಲ್ಲ. ಆದರೆ ಸದ್ಯಕ್ಕೆ ಅವರು ಸೈಲೆಂಟ್ ಆಗಿದ್ದುಕೊಂಡು ಮುಂದಿನ ಯೋಜನೆ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಬಸನಗೌಡ ಪಾಟೀಲ್ ಯತ್ನಾಳ್ ರನ್ನು ಉಚ್ಛಾಟಿಸಿರುವುದಕ್ಕೆ ಪಕ್ಷದಲ್ಲಿ ಭಿನ್ನ ಅಭಿಪ್ರಾಯಗಳು ಕೇಳಿಬರುತ್ತಿವೆ. ಇದರ ನಡುವೆ ಯತ್ನಾಳ್ ಮಾತ್ರ ಕಲಬುರಗಿಯ ಗೆಸ್ಟ್ ಗೌಸ್ ನಲ್ಲಿ ಸೈಲೆಂಟ್ ಆಗಿ ಕಾಲ ಕಳೆಯುತ್ತಿದ್ದಾರೆ.
ದೆಹಲಿಯಿಂದ ಬಂದ ಅವರು ನಿನ್ನೆ ರಾತ್ರಿಯಿಂದ ಗೆಸ್ಟ್ ಹೌಸ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಯಾರ ಕೈಗೂ ಸಿಕ್ಕಿಲ್ಲ. ಯತ್ನಾಳ್ ಮುಂದಿ ನಡೆಯೇನಿರಬಹುದು ಎಂಬ ಕುತೂಹಲ ಎಲ್ಲರಲ್ಲಿದೆ.