ಬಿಜೆಪಿಯಲ್ಲೂ ಶುರುವಾಯ್ತು ಡೆಲ್ಲಿ ಪಾಲಿಟಿಕ್ಸ್

ಬುಧವಾರ, 30 ಜೂನ್ 2021 (09:00 IST)
ಬೆಂಗಳೂರು: ಸಿಎಂ ಬದಲಾವಣೆ ವಿಚಾರಣೆ ಮತ್ತೆ ಬಿಜೆಪಿಯಲ್ಲಿ ಭುಗಿಲೇಳುವ ಲಕ್ಷಣ ಕಾಣುತ್ತಿದೆ. ಸಿಪಿ ಯೋಗೇಶ್ವರ್, ರಮೇಶ್ ಜಾರಕಿಹೊಳಿ, ಬಸನಗೌಡ ಯತ್ನಾಳ್ ನಡುವಿನ ರಹಸ್ಯ ಭೇಟಿ ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.


ಮುಂಬೈಗೆ ತೆರಳಬೇಕಿದ್ದ ರಮೇಶ್ ಜಾರಕಿಹೊಳಿ ದಿಡೀರ್ ಪ್ಲ್ಯಾನ್ ಬದಲಾಯಿಸಿ ದೆಹಲಿಗೆ ತೆರಳಿದ್ದಾರೆ. ಇನ್ನು ಸಿಪಿ ಯೋಗೇಶ್ವರ್ ಕೂಡಾ ದೆಹಲಿಗೆ ಹೋಗಿದ್ದರು. ಇದೀಗ ವಿಜಯಪುರದಲ್ಲಿ ಯತ್ನಾಳ್ ಜೊತೆ ರಹಸ್ಯ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಈ ವೇಳೆ ಇವರಿಗೆ ಚಿತ್ರ ನಟಿ, ಬಿಜೆಪಿಯ ಶ್ರುತಿ ಕೂಡಾ ಸಾಥ್ ನೀಡಿದ್ದು ವಿಶೇಷವಾಗಿತ್ತು. ಹೀಗಾಗಿ ಸಿಎಂ ಬದಲಾವಣೆ ಸರ್ಕಸ್ ಮತ್ತೆ ತೆರೆಮರೆಯಲ್ಲಿ ಮುಂದುವರಿದಿರುವುದು ಖಚಿತವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ