ಬಿಜೆಪಿಯದ್ದು ಮನೆಯೊಂದು ಮೂರು ಬಾಗಿಲಾದ್ರೆ, ಕಾಂಗ್ರೆಸ್‌ನದ್ದು ಊರು ಬಾಗಿಲು: ಅಶೋಕ್‌ ವ್ಯಂಗ್ಯ

Sampriya

ಶುಕ್ರವಾರ, 6 ಡಿಸೆಂಬರ್ 2024 (16:00 IST)
ಬೆಂಗಳೂರು: ಬಿಜೆಪಿಯದ್ದು ಮನೆಯೊಂದು ಮೂರುಬಾಗಿಲು ಅಂತಾರಲ್ಲ, ಕಾಂಗ್ರೆಸ್‌ನದ್ದು ಊರು ಬಾಗಿಲು ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ ಲೇವಡಿ ಮಾಡಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಕಾಂಗ್ರೆಸ್‌ನಲ್ಲಿ ಪವರ್‌ ಶೇರಿಂಗ್‌ ಫೈಟ್‌ ವಿಚಾರ ಕುರಿತು ಪ್ರತಿಕ್ರಿಯಿಸಿದರು.

ಪರಮೇಶ್ವರ್ ಈಗ ಮಾತಾಡಿದ್ದಾರಲ್ಲ, ಮೊದಲು ಸಿಎಂ ಆಗೋದಿಕ್ಕೆ ಅವರಿಗೇ ಆದ್ಯತೆ ಸಿಗಬೇಕು. ಅದಕ್ಕೇ ಅವರು ಮೊನ್ನೆ ಡಿಮ್ಯಾಂಡ್ ಇಟ್ಟಿದ್ದು. ಪರಮೇಶ್ವರ್ ಎರಡು ಸಲ ಅಧ್ಯಕ್ಷರಾಗಿದ್ದವರು. ಮುಖ್ಯಮಂತ್ರು ಆಗ್ತಾರೆಂದಯ ಕಳೆದ ಬಾರಿ ಅವರನ್ನು ಸೋಲಿಸಲಾಯಿತು.  ಬಿಜೆಪಿಯದ್ದು ಮನೆಯೊಂದು ಮೂರು ಬಾಗಿಲು ಅಂತಾರಲ್ಲ, ಕಾಂಗ್ತೆಸ್‌ನವ್ರದ್ದು ಊರು ಬಾಗಿಲಾಗಿದೆಯಲ್ಲ ಎಂದು ಲೇವಡಿ ಮಾಡಿದರು.

ಬಳ್ಳಾರಿಯಲ್ಲಿ ನಡೆದ ಬಾಣಂತಿಯರ ಸಾವಿನ ಹೊಣೆಯನ್ನು ಸಿದ್ದರಾಮಯ್ಯ ಅವರು ಹೊತ್ತು ಸಿಎಂ ಸ್ಥಾನಕ್ಕೆ  ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ