ಮರಳು ಗಣಿಗಾರಿಕೆ ವೀಕ್ಷಿಸಲು ಹೋದ ವಿಜಯೇಂದ್ರಗೆ ಖರ್ಗೆ ಬೆಂಬಲಿಗರಿಂದ ಅಡ್ಡಿ: ಬಿಜೆಪಿ ಕೆಂಡಾಮಂಡಲ

Krishnaveni K

ಶುಕ್ರವಾರ, 18 ಏಪ್ರಿಲ್ 2025 (16:44 IST)
ಕಲಬುರ್ಗಿ: ಬಿಜೆಪಿ ಜನಾಕ್ರೋಶ ಯಾತ್ರೆ ನಡುವೆ ಇಂದು ಕಲಬುರ್ಗಿಯ ಮರಳು ಗಣಿಗಾರಿಕೆ ಪ್ರದೇಶಕ್ಕೆ ಬಿವೈ ವಿಜಯೇಂದ್ರ ದಿಡೀರ್ ಭೇಟಿ ಮಾಡಲು ಹೊರಟಾಗ ಖರ್ಗೆ ಬೆಂಬಲಿಗರು ತಡೆದಿದ್ದಾರೆ ಎನ್ನಲಾಗಿದೆ. ಇದಕ್ಕೆ ಬಿಜೆಪಿ ನಾಯಕರು ಕಿಡಿ ಕಿಡಿಯಾಗಿದ್ದಾರೆ.

ಗೃಹಸಚಿವರು ಗುಲ್ಬರ್ಗಕ್ಕೆ (ಕಲಬುರ್ಗಿ) ಬರುವುದೇ ಇಲ್ಲ. ರಾಜ್ಯದ ಇಲ್ಲಿಗೆ ಬೇರೆ ಕಾನೂನು ಇದೆ. ಇದು ರಿಪಬ್ಲಿಕ್ ಆಪ್ ಗುಲ್ಬರ್ಗ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದ್ದಾರೆ.

ಇಂದು ಇಲ್ಲಿ ಜನಾಕ್ರೋಶ ಯಾತ್ರೆಯಲ್ಲಿ ಮಾತನಾಡಿದ ಅವರು, ರಾಜ್ಯದ ಬೇರೆಲ್ಲೂ ಝೀರೊ ಟ್ರಾಫಿಕ್ ಇಲ್ಲ. ಇಲ್ಲಿ ಇದೆ. ಇದು ರಿಪಬ್ಲಿಕ್ ಅಲ್ವಾ ಎಂದು ಪ್ರಶ್ನಿಸಿದರು. ಚಿತ್ತಾಪುರದಲ್ಲಿ ಮರಳು ಮಾಫಿಯ ನಡೆದಿದೆ. ಕೆಆರ್‍ಐಡಿಎಲ್ ಹೆಸರಿನಲ್ಲಿ ದಿನಕ್ಕೆ 700ರಿಂದ 800 ಲೋಡ್ ಮರಳು ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿದೆ ಎಂದು ಟೀಕಿಸಿದರು.

ದಿನಕ್ಕೆ 3ರಿಂದ 4 ಕೋಟಿ ವ್ಯವಹಾರ ನಡೆಯುತ್ತಿದೆ. ಇದರ ಹಣ ದೆಹಲಿ ಎಐಸಿಸಿಗೆ ಹೋಗುತ್ತಿದೆಯೇ? ಸಿದ್ದರಾಮಯ್ಯನವರಿಗೆ ಹೋಗುತ್ತಿದೆಯೇ? ಇಲ್ಲ ನಿಮ್ಮ ಜಿಲ್ಲಾ ಮಂತ್ರಿಗಳ ಜೋಬಿಗೆ ಹೋಗುತ್ತದೆಯೇ ಎಂದು ಪ್ರಶ್ನಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ