ಬಿಜೆಪಿ ಪಕ್ಷ ಕಾಂಗ್ರೆಸ್, ಮುಸ್ಲಿಂ, ಬೌದ್ಧ, ಜೈನ ಮುಕ್ತ ಭಾರತ ಬಯಸುತ್ತದೆ: ಜ್ಞಾನಪ್ರಕಾಶ್

ಭಾನುವಾರ, 15 ಅಕ್ಟೋಬರ್ 2017 (17:32 IST)
ಬಿಜೆಪಿ ಮೂಲವಾದವೇ ಕೋಮುವಾದ. ಬಿಜೆಪಿಗೆ ಹಿಂದುತ್ವದ ಹೆಸರಲ್ಲಿ ಅಧಿಕಾರ ಪಡೆಯಲು ಹವಣಿಸುತ್ತಿದೆ ಎಂದು ಉರಿಲಿಂಗಪೆಡ್ಡಿ ಮಠದ ಸ್ವಾಮಿಜಿ ಜ್ಞಾನಪ್ರಕಾಶ್ ವಾಗ್ದಾಳಿ ನಡೆಸಿದ್ದಾರೆ.
ಪಿಎಫ್‌ಐ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷಕ್ಕೆ ಯಾವುದೇ ಸಿದ್ಧಾಂತವಿಲ್ಲ. ಕೇವಲ ಸಮಾಜವನ್ನು ಒಡೆದು ಅಧಿಕಾರಕ್ಕೆ ಬರಬೇಕು ಎನ್ನುವುದೇ ಮುಖ್ಯ ಗುರಿಯಾಗಿದೆ ಎಂದು ತಿಳಿಸಿದ್ದಾರೆ.
 
ಬಿಜೆಪಿ ಸದ್ಯ ಕಾಂಗ್ರೆಸ್ ಮುಕ್ತ ಭಾರತ ಎನ್ನುತ್ತಿದೆ, ನಂತರ ಮುಸಲ್ಮಾನ್ ಮುಕ್ತ ಭಾರತ ಎನ್ನುತ್ತದೆ. ತದನಂತರ ಬೌದ್ಧ ಮುಕ್ತ, ಜೈನ ಮುಕ್ತ ಭಾರತ ಎನ್ನುತ್ತದೆ ಎಂದು ಕಿಡಿಕಾರಿದ್ದಾರೆ.
 
ಭಾರತ ಜಾತ್ಯಾತೀತ ರಾಷ್ಟ್ರ. ಇಲ್ಲಿ ಪ್ರತಿಯೊಂದು ಸಮುದಾಯಕ್ಕೂ ತನ್ನದೇ ಆದ ಹಕ್ಕಿದೆ. ಹಿಂದೂಗಳು ಎಷ್ಟು ಮುಖ್ಯವೋ , ಮುಸ್ಲಿಮರು ಕೂಡಾ ಅಷ್ಟೇ ಮುಖ್ಯವಾಗಿದ್ದಾರೆ. ಸಮುದಾಯಗಳನ್ನು ಒಡೆದು ಶಾಂತಿಯಿಂದ ಭಾಳ್ವೆ ಮಾಡಲು ಸಾಧ್ಯವಿಲ್ಲ ಎಂದು ಉರಿಲಿಂಗ ಮಠದ ಸ್ವಾಮಿಜಿ ಜ್ಞಾನಪ್ರಕಾಶ್ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ