ಸಿಎಂ ಕಾರ್ಯಕ್ರಮಕ್ಕೆ ಕಪ್ಪು ಪಟ್ಟೆ ಪ್ರತಿಭಟನೆ ಬಿಸಿ
ಕೆಆರ್ ಎಸ್ ಡ್ಯಾಂಗೆ ಬಾಗಿನ ಅರ್ಪಿಸಲು ಬಂದಿದ್ದ ಸಿಎಂಗೆ ಪ್ರತಿಭಟನೆಯ ಬಿಸಿ ತಾಗಿದೆ.
ಮಂಡ್ಯದಲ್ಲಿ ಘಟನೆ ನಡೆದಿದ್ದು, ಹೋರಾಟಗಾರನನ್ನು ಪೇಪರ್ ಮಿಲ್ ಗೇಟ್ ಬಳಿ ಬಂಧಿಸಿ ಕರೆದೊಯ್ದಿದ್ದಾರೆ ಪೊಲೀಸರು.
ತುಂಬಿದ KRS ಜಲಾಶಯಕ್ಕೆ ಸಿ.ಎಂ.ಬಾಗಿನ ಅರ್ಪಣೆ ಮಾಡಿದರು. 5 ನೇ ಬಾರಿ ಸಿ.ಎಂ. ಆಗಿ ಬಾಗಿನ ಅರ್ಪಿಸಿದ್ದಾರೆ ಯಡಿಯೂರಪ್ಪ.
ಅರ್ಚಕ ಡಾ.ಭಾನು ಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಬಾಗಿನಕ್ಕೆ ಪೂಜೆ ಸಲ್ಲಿಕೆ ಮಾಡಲಾಯಿತು. ಬಾಗಿನ ಸಮರ್ಪಣೆ ಬಳಿಕ ಕಾವೇರಿ ಮಾತೆಗೆ ಪೂಜೆ ಸಲ್ಲಿಕೆ ಮಾಡಲಾಯಿತು.