ವಿಟಮಿನ್ ಬಿ12 ನ್ನು ನಮ್ಮ ದೇಹವೇ ಉತ್ಪತ್ತಿ ಮಾಡಲು ಹೀಗೆ ಮಾಡಿ
ಶುಕ್ರವಾರ, 21 ಆಗಸ್ಟ್ 2020 (11:33 IST)
ಬೆಂಗಳೂರು : ವಿಟಮಿನ್ ಬಿ12 ದೇಹಕ್ಕೆ ಅತ್ಯವಶ್ಯಕವಾಗಿಬೇಕು. ಈ ವಿಟಮಿನ್ ಬಿ12 ಕಡಿಮೆಯಾದರೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದಕಾರಣ ಈ ವಿಟಮಿನ್ ಬಿ12 ನ್ನು ನಮ್ಮ ದೇಹಕ್ಕೆ ಒದಗಿಸಲು ಏನು ಮಾಡಬೇಕೆಂಬುದನ್ನು ತಿಳಿದುಕೊಳ್ಳಿ.
ವಿಟಮಿನ್ ಬಿ12 ನ್ನು ನಮ್ಮ ದೇಹ ಕರುಳಿನಲ್ಲಿ ಉತ್ಪತ್ತಿ ಮಾಡುತ್ತದೆ. ಆದರೆ ಕೆಲವು ಕಾರಣಗಳಿಂದ ನಮ್ಮ ದೇಹದಲ್ಲಿ ಒಳ್ಳೆ ಬ್ಯಾಕ್ಟೀರಿಯಾಗಳು ಕಡಿಮೆಯಾದಾಗ ವಿಟಮಿನ್ ಬಿ12 ಉತ್ಪಾದನೆ ಕಡಿಮೆಯಾಗುತ್ತದೆ. ಮಾಂಸ, ಮೊಟ್ಟೆ ತಿಂದರೆ ಬಿ12 ಉತ್ಪತ್ತಿಯಾಗುತ್ತದೆ.
ಆದರೆ ಸಸ್ಯ ಹಾರಿಗಳಿಗೆ ಮಾಂಸ, ಮೊಟ್ಟೆ ತಿನ್ನಲು ಆಗದ ಕಾರಣ ದೇಹದಲ್ಲಿ ಒಳ್ಳೆ ಬ್ಯಾಕ್ಟೀರಿಯಾಗಳನ್ನು ಹೆಚ್ಚಿಸಬೇಕು. ಅದಕ್ಕೆ ಈ ಮನೆಮದ್ದನ್ನು ಸೇವಿಸಿ. ನೀರು, ಉಪ್ಪು, ರಾಗಿ ಹಿಟ್ಟನ್ನು ಹಾಕಿ ಚೆನ್ನಾಗಿ ಕುದಿಸಿ ಸೋಸಿ ಅದಕ್ಕೆ ಮೊಸರು ಸೇರಿಸಿ ಕುಡಿಯಿರಿ.