ಹೆಚ್ಚಿನ ವಿಚಾರಣೆಗಾಗಿ ಮತ್ತೆ 5 ದಿನಗಳ ಪೊಲೀಸರ ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಪ್ರಕರಣದ ಹಿಂದಿನ ರಹಸ್ಯವೇನು ಎಂಬುದನ್ನು ಮಾಹಿತಿ ಕಲೆಹಾಕಲಿದ್ದಾರೆ. ನಕಲಿ ವಿಡಿಯೋ ಸೃಷ್ಟಿಸಿ ಹಣ ನೀಡದಿದ್ದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿಬೀಡುವುದಾಗಿ ಬೆದರಿಕೆಯೊ ಡ್ಡಿದ್ದಾರೆ ಎನ್ನಲಾಗಿದೆ. ಡಿ.25 ರಂದು ಸಚಿವರ ಪಿಎಗೆ ವಿಡಿಯೋ ಕಳಿಸಿದ್ದರು. ಈ ಹಿನ್ನೆಲೆ ಸಚಿವ ಸೋಮಶೇಖರ್ ಪುತ್ರ ನಿಶಾಂತ್ ರಿಂದ ಸಿಸಿಬಿಗೆ ದೂರು ನೀಡಿ ದುಷ್ಪರ್ಮಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಸಂಬಂಧ ಸಿಸಿಬಿ ಪೊಲೀಸರಿಂದ ಪ್ರಕರಣ ದಾಖಲಾಗಿದೆ.