ಸಿಎಂ ನಿವಾಸದಲ್ಲಿ ಕೊರೊನಾ ಸ್ಫೋಟ !

ಭಾನುವಾರ, 9 ಜನವರಿ 2022 (08:31 IST)
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ನಿವಾಸದಲ್ಲಿ ಅವರ ಪತ್ನಿ, ಇಬ್ಬರು ಮಕ್ಕಳು ಮತ್ತು ಸೊಸೆ ಸೇರಿದಂತೆ ಒಟ್ಟು 15 ಜನರು ಕೊರೊನ ವೈರಸ್ ಪಾಸಿಟಿವ್ ಆಗಿದ್ದಾರೆ.
ಅಚ್ಚರಿಯೆಂಬಂತೆ ಹೇಮಂತ್ ಸೊರೇನ್ ವರದಿ ನೆಗೆಟಿವ್ ಬಂದಿದೆ.   ಮುಖ್ಯಮಂತ್ರಿಯವರ ನಿವಾಸದಲ್ಲಿ ಇಲ್ಲಿಯವರೆಗೆ 62 ಜನರನ್ನು ಕೊವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ರಾಂಚಿಯ ಮುಖ್ಯ ವೈದ್ಯಾಧಿಕಾರಿ ವಿನೋದ್ ಕುಮಾರ್ ತಿಳಿಸಿದ್ದಾರೆ.

ಅವರಲ್ಲಿ 24 ಮಂದಿಯ ವರದಿಗಳು ಇಂದು (ಶನಿವಾರ) ಸಂಜೆ ಲಭ್ಯವಾಗಿದೆ. ಪಾಸಿಟಿವ್ ಬಂದ 15 ಮಂದಿಯಲ್ಲಿ ಸಿಎಂ ಪತ್ನಿ ಕಲ್ಪನಾ ಸೊರೆನ್, ಅವರ ಇಬ್ಬರು ಮಕ್ಕಳಾದ ನಿತಿನ್ ಮತ್ತು ವಿಶ್ವಜಿತ್, ಸೊಸೆ ಸರಳಾ ಮುರ್ಮು ಮತ್ತು ಅಂಗರಕ್ಷಕ ಸೇರಿದ್ದಾರೆ ಎಂದು ಕುಮಾರ್ ಮಾಹಿತಿ ನೀಡಿದ್ದಾರೆ.

ನಿವಾಸದಲ್ಲಿರುವ ಎಲ್ಲಾ ಸೋಂಕಿತ ರೋಗಿಗಳು ಸೌಮ್ಯವಾದ ಕೊವಿಡ್ ರೋಗಲಕ್ಷಣಗಳನ್ನು ಹೊಂದಿದ್ದಾರೆ. ಆದ್ದರಿಂದ ಅವರಿಗೆ ಮನೆಯಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಬಹುದು ಎಂದು ರಾಂಚಿ ಮುಖ್ಯಮಂತ್ರಿ ಕಚೇರಿ ಪಿಟಿಐಗೆ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ