ಪದಯಾತ್ರೆಗೆ ಯಾರು ಅಡಿಮಾಡೋಕಾಗಲಾ...!!!

ಭಾನುವಾರ, 9 ಜನವರಿ 2022 (14:46 IST)
ಉದಯಿಸುವ ಸೂರ್ಯ, ಹರಿಯುವ ನೀರನ್ನು ತಡೆಯಲಾಗಲ್ಲ. ಅದೇ ರೀತಿ ನಮ್ಮ ಪಾದಯಾತ್ರೆಯನ್ನು ತಡೆಯುವುದಕ್ಕೆ ಆಗಲ್ಲ. ಪಾದಯಾತ್ರೆಗೆ ನಮ್ಮ ತಾಲೂಕಿನಲ್ಲಿ ಎಲ್ಲರೂ ಬೆಂಬಲಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಮೇಕೆದಾಟು ಪಾದಯಾತ್ರೆಗೆ ಬರುವವರಿಗೆ ತೊಂದರೆ ನೀಡುತ್ತಿದ್ದಾರೆ. ಆದರೆ ನೀವು ಯಾರನ್ನೂ ತಡೆಯುವುದಕ್ಕೆ ಆಗಲ್ಲ. ಉದಯಿಸುವ ಸೂರ್ಯ, ಹರಿಯುವ ನೀರನ್ನು ತಡೆಯಲಾಗಲ್ಲ. ಅದೇ ರೀತಿ ನಮ್ಮ ಪಾದಯಾತ್ರೆಯನ್ನು ತಡೆಯುವುದಕ್ಕೆ ಆಗಲ್ಲ. ಪಾದಯಾತ್ರೆಗೆ ನಮ್ಮ ತಾಲೂಕಿನಲ್ಲಿ ಎಲ್ಲರೂ ಬೆಂಬಲಿಸುತ್ತಿದ್ದಾರೆ. ಆದರೆ ಕೆಲವರು ಪಾದಯಾತ್ರೆಗೆ ಹೋಗದಂತೆ ಕರೆ ಮಾಡಿ ಹೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಂಗಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
 
ಎಲ್ಲರಿಗೂ ಪಾದಯಾತ್ರೆಗೆ ಬನ್ನಿ ಎಂದು ಆಹ್ವಾನ ನೀಡುತ್ತೇನೆ. ಪಾದಯಾತ್ರೆಗೆ ಬರಲು ನಾನು ಯಾರಿಗೂ ಬಲವಂತ ಮಾಡಲ್ಲ. ಪಾದಯಾತ್ರೆ ನಮ್ಮ ಕಾರ್ಯಕ್ರಮವಲ್ಲ, ನಿಮ್ಮ ಕಾರ್ಯಕ್ರಮ. ಯಾರು ಬೇಕಾದರೂ ಪಾದಯಾತ್ರೆಯಲ್ಲಿ ಭಾಗವಹಿಸಬಹುದು. ಎಸ್‌ಪಿ, ಡಿಸಿ ಏನು ಮಾಡುತ್ತಾರೆ. ಹೆಚ್ಚು ಎಂದರೆ ಇವರು ಸಿದ್ದರಾಮಯ್ಯ ಮತ್ತು ನನ್ನ ಮೇಲೆ ಕೇಸ್ ಹಾಕಬಹುದು. ನಾನು ಫಿಲ್ಮ್ ಚೇಂಬರ್‌ಗೆ ಕೂಡ ಹೋಗಿ ಎಲ್ಲರನ್ನೂ ಆಹ್ವಾನಿಸಿದ್ದೇನೆ. ಯಾರು ಬರುತ್ತಾರೆಂದು ನನಗೆ ಗೊತ್ತಿಲ್ಲ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ