ಬಾಂಬರ್ ಪೋಟೋ ಬಿಡುಗಡೆ ಮಾಡಿದ ಎನ್ ಐ ಎ

geetha

ಗುರುವಾರ, 7 ಮಾರ್ಚ್ 2024 (15:40 IST)
ಬೆಂಗಳೂರು-ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬರ್ ಪೋಟೋ ಎನ್ ಐ ಎ  ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.ಇನ್ನೂ  ಬಾಂಬರ್ ಬಗ್ಗೆ ಸುಳಿವು ನೀಡಿದ್ರೆ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಎನ್ಐಎ ಘೋಷಣೆ ಮಾಡಿದೆ.080-29510900, 8904241100 ಸಂಖ್ಯೆಗೆ ಫೋನ್ ಮಾಡಿ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ NIA ಮನವಿ ಮಾಡಿದೆ.ಸಿಸಿಬಿ ತನಿಖೆಯ ವೇಳೆ ಬಾಂಬರ್ ಮಾಸ್ಕ್ ಹಾಕದ ಫೋಟೋ ಪತ್ತೆಯಾಗಿದೆ.
 
ಶಂಕಿತ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸಿದ ಫೋಟೋ ರಿಲೀಸ್  ಮಾಡಲಾಗಿದೆ.ಬಿಎಂಟಿಸಿ ವೋಲ್ವೊ ಬಸ್ ನಲ್ಲಿ ಶಂಕಿತ ಉಗ್ರ ಪ್ರಯಾಣ ಮಾಡಿದ್ದಾನೆ. ಅಲ್ಲದೇ ಕೈಯಲ್ಲಿ ಕಪ್ಪು ಬ್ಯಾಗ್ ಹಿಡಿದು ಓಡಾಡುತ್ತಿರುವುದು ಪತ್ತೆಯಾಗಿದೆ.ಮಾರ್ಚ್ 1ರಂದು ಬೆಳಗ್ಗೆ 11.42ಕ್ಕೆ ಬಸ್ ನಲ್ಲಿ ಪ್ರಯಾಣ  ಮಾಡಿದ್ದಾನೆ.ಬಸ್ ನಲ್ಲಿದ್ದ ಸಿಸಿ ಕ್ಯಾಮರಾ ನೋಡಿದ ಶಂಕಿತ ಉಗ್ರ ಬಾಂಬರ್ ಬಿಳಿ ಟೋಪಿ, ಕನ್ನಡಕ, ಮಾಸ್ಕ್ ಧರಿಸಿದ್ದಾನೆ.
 
ಬಾಂಬರ್ ಬಗ್ಗೆ ಸುಳಿವು ನೀಡಿದ್ರೆ 10 ಲಕ್ಷ ಬಹುಮಾನ ನೀಡುವುದಾಗಿ ಎನ್ ಐ ಎ ಘೋಷಣೆ ಮಾಡಿದೆ. ಮಾರ್ಚ್ 1 ರಂದು ರಾಮೇಶ್ವರಂ ಕೆಫೆಯಲ್ಲಿ ಸ್ಫೋಟಕ್ಕೆ ಕಾರಣವಾದ ಆರೋಪಿಯ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ರೂ.ಗಳ ನಗದು ಬಹುಮಾನವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬುಧವಾರ ಘೋಷಿಸಿದೆ. 'ವಾಂಟೆಡ್' ಪೋಸ್ಟರ್ನಲ್ಲಿ ಆರೋಪಿಗಳ ರೇಖಾಚಿತ್ರವನ್ನು ಎನ್‌ಐಎ ಬಿಡುಗಡೆ ಮಾಡಿದೆ ಮತ್ತು ಮಾಹಿತಿದಾರರ ಗುರುತನ್ನು ರಹಸ್ಯವಾಗಿಡಲಾಗುವುದು ಎಂದು ಹೇಳಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ